Publish Date: Sun, 15 Jan 2017 (11:35 IST)
Updated Date: Sun, 15 Jan 2017 (11:37 IST)
ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಚಿತ್ರ ಈಗಾಗಲೆ ಸಾಗರೋತ್ತರ ದೇಶಗಳಲ್ಲಿ ಬಿಡುಗಡೆಯಾಗಿದ್ದು ಪ್ರದರ್ಶನವೂ ಕಾಣುತ್ತಿದೆ. ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾಗಿದೆ. ಇದೀಗ ಅಮೆರಿಕಾಗೆ ಕಿರಿಕ್ ಪಾರ್ಟಿ ಪ್ರಯಾಣ ಬೆಳೆಸಲಿದೆ.
ಫೆಬ್ರವರಿ 1ರಂದು ಅಮೆರಿಕದಲ್ಲಿ ಕಿರಿಕ್ ಪಾರ್ಟಿ ರಿಲೀಸ್ ಆಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ. ಒಂದೇ ವಾರದಲ್ಲಿ ರೂ.10 ಕೋಟಿ ಕಲೆಕ್ಷನ್ ಮಾಡಿದ ಕಿರಿಕ್ ಪಾರ್ಟಿಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಂಯುಕ್ತಾ ಹೆಗಡೆ, ರಶ್ಮಿಕಾ ಮಂದಣ್ಣ, ಪ್ರವೀಣ್ ಶೆಟ್ಟಿ, ಕೆ.ಎಸ್. ಶ್ರೀಧರ್, ಅಚ್ಯುತ ಕುಮಾರ್ ಇನ್ನಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ರಿಶಬ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ ಸಿನಿಮಾ ಇದು. ಅಜನೀಶ್ ಲೋಕನಾಥ್ ಸಂಗೀತ, ಕರಮ್ ಚಾವ್ಲಾ ಕ್ಯಾಮೆರಾ ವರ್ಕ್ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.