ಬೆಂಗಳೂರು: ಕಿರಿಕ್ ಪಾರ್ಟಿ ಸದ್ಯಕ್ಕೆ ಕನ್ನಡದಲ್ಲಿ ಅತ್ಯಂತ ಹೆಚ್ಚು ಸದ್ದು, ಹಣ, ಕೀರ್ತಿ ಮಾಡಿದ ಸಿನಿಮಾ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಮತ್ತು ಅವರ ಗೆಳಯರ ಗ್ಯಾಂಗ್ ನಷ್ಟೇ ಮತ್ತೊಂದು ವಸ್ತು ಗಮನ ಸೆಳೆದಿತ್ತು.
ಅದು ನಾಯಕ ಓಡಿಸುವ ಸೂರಿಲ್ಲದ ಕಾರು. ಪೋಸ್ಟರ್ ನಿಂದ ಹಿಡಿದು, ಹಾಡುಗಳಲ್ಲೂ ಈ ಕಾರು ಬಂದು ಹೋಗುತ್ತದೆ. ಈ ಹಳದಿ ಕಾಂಟೆಸ್ಸಾ ಕಾರನ್ನು ಹರಾಜು ಹಾಕಲಾಗುತ್ತಿದೆಯಂತೆ. ಅದೂ ಸಾಮಾಜ ಸೇವೆ ಉದ್ದೇಶಕ್ಕಾಗಿ.
ಇದರ ಮಾರಾಟಕ್ಕೆ ನಿರ್ದೇಶಕ ರಿಷಬ್ ಶೆಟ್ಟಿ ತಯಾರಿ ನಡೆಸಿದ್ದಾರಂತೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಕಿರಿಕ್ ಕಾರಿಗಾಗಿ ಪ್ರತ್ಯೇಕ ಪೇಜ್ ಓಪನ್ ಆಗಿದೆ. ಇಷ್ಟೆಲ್ಲಾ ದೊಡ್ಡ ಪಬ್ಲಿಕ್ ಫಿಗರ್ ಆಗಿರುವ ಕಾರು ಕೊಳ್ಳಲು ಜನ ಮುಂದೆ ಬರದೇ ಇರುತ್ತಾರೆಯೇ?!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ