ಟ್ವಿಟರ್ ಬಿಡುವ ಬೆದರಿಕೆ ಹಾಕಿದ ಕಿಚ್ಚ ಸುದೀಪ್! ಕಾರಣ ಏನು ಗೊತ್ತಾ?

Webdunia
ಮಂಗಳವಾರ, 19 ಮಾರ್ಚ್ 2019 (08:47 IST)
ಬೆಂಗಳೂರು: ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿರುವ ಕಿಚ್ಚ ಸುದೀಪ್ ಗೆ ಇದೀಗ ಅದುವೇ ಉಸಿರುಗಟ್ಟಿಸುವಂತೆ ಮಾಡುತ್ತಿದೆ. ಹೀಗಾಗಿ ಕಿಚ್ಚ ಟ್ವಿಟರ್ ಬಿಡುವ ಬೆದರಿಕೆ ಹಾಕಿದ್ದಾರೆ.


ಅಭಿಮಾನಿಗಳು ಕಿಚ್ಚನ ಒಂದೇ ಒಂದು ಪ್ರತಿಕ್ರಿಯೆಗಾಗಿ ರಕ್ತದಲ್ಲಿ ಪತ್ರ ಬರೆಯುವುದು, ಕೈ ಮೇಲೆ ಹಚ್ಚೆ ಹಾಕಿಸಿಕೊಳ‍್ಳುವುದು, ಹಾಲಿನ ಅಭಿಷೇಕ ಮಾಡುವ ಫೋಟೋ ಪ್ರಕಟಿಸುವುದು ಇತ್ಯಾದಿ ಮಾಡುತ್ತಲೇ ಇರುತ್ತಾರೆ.

ಇತ್ತೀಚೆಗಷ್ಟೇ ಅಭಿಮಾನಿಯೊಬ್ಬ ರಕ್ತದಲ್ಲಿ ಪತ್ರ ಬರೆದು ಸುದೀಪ್ ಟ್ವಿಟರ್ ಗೆ ಟ್ಯಾಗ್ ಮಾಡಿದ್ದ. ಇದನ್ನು ನೋಡಿ ಇಂತಹ ಪ್ರಯತ್ನ ಮಾಡಬೇಡಿ ಎಂದು ಕಿಚ್ಚ ಆಗಲೇ ಮನವಿ ಮಾಡಿದ್ದರು. ಆದರೂ ಅಭಿಮಾನಿಗಳ ಅತಿರೇಕದ ವರ್ತನೆ ನಿಂತಿಲ್ಲ.

ಇದೀಗ ಅಭಿಮಾನಿಯೊಬ್ಬ ರಕ್ತದಲ್ಲಿ ಕೈ ಮೇಲೆ ಕಿಚ್ಚ ಎಂದು ಬರೆದುಕೊಂಡು ಪ್ರೀತಿ ವ್ಯಕ್ತಪಡಿಸಿದ್ದು ಸುದೀಪ್ ಆಕ್ರೋಶಕ್ಕೆ ಕಾರಣವಾಗಿದೆ. ನಿಮಗೆ ನನ್ನ ಮೇಲೆ ಏನೇ ಪ್ರೀತಿಯಿರಲಿ. ಅದನ್ನು ತೋರಿಸುವ ಬಗೆ ಹೀಗಲ್ಲ. ನನ್ನ ಗಮನಕ್ಕೆ ತರಬೇಕು ಎಂಬ ಒಂದೇ ಉದ್ದೇಶಕ್ಕೆ ಇಂತಹ ಹುಚ್ಚಾಟವೆಲ್ಲಾ ಮಾಡಿದರೆ ನಾನು ಈ ಟ್ವಿಟರ್ ವೇದಿಕೆಯನ್ನೇ ಬಿಡಬೇಕಾಗುತ್ತದೆ ಎಂದು ಕಿಚ್ಚ ಈ ಬಾರಿ ಗರಂ ಆಗಿ ಎಚ್ಚರಿಕೆ ನೀಡಿದ್ದಾರೆ. ಇನ್ನಾದರೂ ಅಭಿಮಾನಿಗಳು ಅವರ ಮಾತಿಗೆ ಬೆಲೆ ಕೊಡುತ್ತಾರಾ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BB Season 12: ಹೊಸ ಆಟ ಶುರು ಮಾಡಿದ ಅಶ್ವಿನಿ ಗೌಡ ಕಾಟಕ್ಕೆ ಮನೆ ಮಂದಿ ಸುಸ್ತು

ನಾಳೆಯಿಂದ ಕಾಮಿಡಿ ಕಿಲಾಡಿಗಳು ಶೋ ಶುರು, ಜಡ್ಜ್ ಯಾರು ಗೊತ್ತಾ

ಅಬ್ ಕಿ ಬಾರ್, ಮೋದಿ ಸರ್ಕಾರ್ ಘೋಷಣೆ ಹಿಂದಿನ ವ್ಯಕ್ತಿ ಪಿಯೂಷ್ ಪಾಂಡೆ ಇನ್ನಿಲ್ಲ

ವಾರಿಜಾ ವೇಣುಗೋಪಾಲ್ ರನ್ನು ಮದುವೆಯಾದ ರಘು ದೀಕ್ಷಿತ್: ಯಾರೆಲ್ಲಾ ಬಂದಿದ್ರು ನೋಡಿ

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಸೂಸೈಡ್‌ ಕೇಸ್‌: ನಟಿ ರಿಯಾ ಚಕ್ರವರ್ತಿಗೆ ಸಿಬಿಐ ಕ್ಲೀನ್‌ಚಿಟ್

ಮುಂದಿನ ಸುದ್ದಿ
Show comments