ಕಚ್ಚೆ ಹಾಕಿಕೊಂಡು ದಿನವಿಡೀ ಟೆಂಪಲ್ ರನ್ ಮಾಡಿದ ಕಿಚ್ಚ ಸುದೀಪ್

Krishnaveni K
ಶನಿವಾರ, 27 ಏಪ್ರಿಲ್ 2024 (15:55 IST)
Photo Courtesy: Twitter
ರಾಯಚೂರು: ಶೂಟಿಂಗ್ ನಿಂದ ಕೊಂಚ ಬಿಡುವು ಪಡೆದಿರುವ ಕಿಚ್ಚ ಸುದೀಪ್ ಇಂದು ದಿನವಿಡೀ ಪತ್ನಿ ಜೊತೆ ಟೆಂಪಲ್ ರನ್ ನಡೆಸಿದ್ದಾರೆ. ಮಂತ್ರಾಲಯ ಮತ್ತು ರಾಯಚೂರಿನ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಮೊದಲು ರಾಯಚೂರಿನ ಹನುಮ ದೇವಾಲಯಕ್ಕೆ ಭೇಟಿ ನೀಡಿದ ಸುದೀಪ್ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅವರು ಪಂಚೆ ಮತ್ತು ಜುಬ್ಬಾ ತೊಟ್ಟುಕೊಂಡು ಗಮನ ಸೆಳೆದರು. ಪತ್ನಿ ಪ್ರಿಯಾ ಸುದೀಪ್ ಕೂಡಾ ಸಾಥ್ ನೀಡಿದ್ದಾರೆ. ಸುದೀಪ್ ಬಂದ ಸುದ್ದಿ ತಿಳಿದು ಅನೇಕ ಅಭಿಮಾನಿಗಳು ದೇವಾಲಯದ ಸುತ್ತ ಜಮಾಯಿಸಿದ್ದರು. ಸುದೀಪ್ ವಾಹನಕ್ಕೆ ಮುತ್ತಿಗೆ ಹಾಕಿ ಸೆಲ್ಫೀಗಾಗಿ ಮುಗಿಬಿದ್ದರು.

ಇದಾದ ಬಳಿಕ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಸನ್ನಿಧಾನಕ್ಕೆ ಭೇಟಿ ನೀಡಿದರು. ಈ ವೇಳೆ ಸುದೀಪ್ ಕಚ್ಚೆ ಪಂಚೆ ಹಾಕಿಕೊಂಡು ಗಮನ ಸೆಳೆದರು. ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಪೂಜೆ ಸಲ್ಲಿಸಿದ ಬಳಿಕ ಅಲ್ಲಿಯೂ ಅವರನ್ನು ನೋಡಲು ಜನ ಸಾಗರವೇ ಹರಿದುಬಂದಿತ್ತು. ಮಂತ್ರಾಲಯದಿಂದ ಕಾರು ಏರಿ ತೆರಳುವ ಮುನ್ನ ಜನರತ್ತ ಕೈ ಬೀಸಿದ್ದಾರೆ.

ಕಿಚ್ಚ ಸುದೀಪ್ ಇದೀಗ ಮ್ಯಾಕ್ಸ್ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿದ್ದಾರೆ. ಕೆಲವು ದಿನಗಳಿಂದ ಮ್ಯಾಕ್ಸ್ ಶೂಟಿಂಗ್ ಗಾಗಿ ಚೆನ್ನೈನಲ್ಲೇ ಬೀಡುಬಿಟ್ಟಿದ್ದಾರೆ. ನಿನ್ನೆ ಕರ್ನಾಟಕದಲ್ಲಿ ಮತದಾನವಾಗಿದ್ದರಿಂದ ಪತ್ನಿ ಸಮೇತರಾಗಿ ಬಂದು ಮತ ಚಲಾಯಿಸಿ ತೆರಳಿದ್ದರು. ಇಂದು ಕುಟುಂಬ ಸಮೇತರಾಗಿ ಟೆಂಪಲ್ ರನ್ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಗೆ ಜೈಲಿನಲ್ಲಿ ಬೇಕಾದ್ದು ಕೊಡ್ತಿಲ್ಲ ಎಂದು ಕೋರ್ಟ್ ಗೆ ಅರ್ಜಿ

ಯಾರೋ ಒಬ್ಬರಿಂದ ಇಂಡಸ್ಟ್ರಿ ನಡೀತಿಲ್ಲ: ದರ್ಶನ್ ಗೆ ಟಾಂಗ್ ಕೊಟ್ಟ ಉಮಾಪತಿ ಗೌಡ

ನಾನು ಕಂಡಿದ್ದು ಮ್ಯಾಜಿಕ್‌ಗಿಂತ ಕಡಿಮೆಯಿರಲಿಲ್ಲ: ರಿಷಭ್ ಶೆಟ್ಟಿ ಕೊಂಡಾಡಿದ ರಿತೇಶ್ ದೇಶ್‌ಮುಖ್

ರಿಷಬ್ ಶೆಟ್ಟಿಯನ್ನು ನೋಡಿ ನಾವು ತುಂಬಾ ಕಲಿಯೋದಿದೆ: ಮಲಯಾಳಂ ನಟ ಜಯರಾಂ

ಕಾಂತಾರ 1: ರಿಷಭ್ ಶೆಟ್ಟಿ ಕೆಲಸಕ್ಕೆ ಕೆ ಅಣ್ಣಾಮಲೈ ಫಿದಾ, ಪೋಸ್ಟ್‌ನಲ್ಲಿ ಏನಿದೆ

ಮುಂದಿನ ಸುದ್ದಿ
Show comments