Webdunia - Bharat's app for daily news and videos

Install App

ಟ್ವಿಟರ್ ನಲ್ಲಿ ಸುದೀಪ್ ಗೆ ಹೆಚ್ಚು ಫಾಲೋವರ್ಸ್ ವರದಿ ನವರಸನಾಯಕ ಜಗ್ಗೇಶ್ ಗೆ ಬೇಸರ ತಂದಿದೆಯಾ?

Webdunia
ಗುರುವಾರ, 24 ನವೆಂಬರ್ 2016 (14:11 IST)
ಬೆಂಗಳೂರು: ಕಿಚ್ಚ ಸುದೀಪ್ ಟ್ವಿಟರ್ ಖಾತೆಯಲ್ಲಿ 5 ಲಕ್ಷ ಫಾಲೋವರ್ಸ್ ಹೊಂದಿದ ಏಕೈಕ ನಟ ಎಂಬ ವರದಿ ನವರಸನಾಯಕ ಜಗ್ಗೇಶ್ ಹಾಗೂ ಅಭಿಮಾನಿಗಳಿಗೆ ಬೇಸರ ತಂದಿದೆಯೇ? ಅವರ ಟ್ವಿಟರ್ ಸಂದೇಶಗಳನ್ನು ನೋಡಿದರೆ ಹೌದು ಎನಿಸುತ್ತದೆ.

ಜಗ್ಗೇಶ್ ಅಭಿಮಾನಿಗಳು ಸುದೀಪ್ ಟ್ವಿಟರ್ ಫಾಲೋವರ್ಸ್ ಸಂಖ್ಯೆಯನ್ನು ಉಲ್ಲೇಖಿಸಿ ಜಗ್ಗೇಶ್ ಗೆ ಸಂದೇಶ ಬರೆದಿದ್ದಾರೆ. ನಿಮ್ಮಅಕೌಂಟಿನಲ್ಲಿ 56 ಸಾವಿರ ಫಾಲೋವರ್ಸ್ ಇದ್ದರೂ, ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ನಟರ ಹೆಸರು ಪಟ್ಟಿ ಮಾಡುವಾಗ ನಿಮ್ಮ ಹೆಸರು ಮರೆತಿದ್ದೇಕೆ ಎಂಬುದು ಜಗ್ಗೇಶ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣ.

ಇದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್ ನನಗೆ ಸಂಖ್ಯೆ ಮುಖ್ಯವಲ್ಲ. 2013 ರಿಂದ ಟ್ವಿಟರ್ ನಲ್ಲಿದ್ದೇನೆ. ಅಭಿಮಾನದದ ಅಳತೆಗೋಲು ಸಂಖ್ಯೆಯಿಂದಲ್ಲ. ನಟನ ವರ್ಷಾಚರಣೆ, ಹಿರಿತನ, ಚಿತ್ರ ಸಂಖ್ಯೆ ಸೇವಾಕ್ಷೇತ್ರದ ಆಯಾಮ. ಕೆಲವೊಮ್ಮೆ ಬೇರೆ ವಿಷಯಗಳು ಪ್ರಾಮಾಣಿಕತೆ ಮರೆಸುತ್ತೆ! ಎಂದಿದ್ದಾರೆ.

ಇಷ್ಟಕ್ಕೇ ಸುಮ್ಮನಾಗದೇ, ನನ್ನ ಅಭಿಮಾನಿಗಳು ಮಧ್ಯಮ ವರ್ಗದವರು ಮತ್ತು ಗ್ರಾಮೀಣ ಭಾಗದವರು. ಅವರ ಅಭಿಮಾನ ಕಣ್ಣಿಗೆ ಕಾಣೋಲ್ಲ. ನನಗೆ ಸಂಖ್ಯೆ ಮುಖ್ಯವಲ್ಲ. ಪ್ರೀತಿಯೇ ಮುಖ್ಯ ಎಂದು ಪ್ರತಿಕ್ರಿಯಿಸಿದ್ದಾರೆ.

ಕೆಲವು ಮಾಧ್ಯಮಗಳಲ್ಲಿ ಸುದೀಪ್ ಜತೆಗೆ ಅತೀ ಹೆಚ್ಚು ಟ್ವಿಟರ್ ಬಳಸುವ ನಟರ ಪೈಕಿ ಉಪೇಂದ್ರ, ದರ್ಶನ್ ಮುಂತಾದ ನಟರ ಹೆಸರು ನೀಡಿದ್ದರೂ, ಸದಾ ಟ್ವಿಟರ್ ನಲ್ಲಿ ಕ್ರಿಯಾಶೀಲರಾಗಿರುವ ಜಗ್ಗೇಶ್ ಹೆಸರು ಉಲ್ಲೇಖವಾಗಿರಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments