Happy Birthday Kiccha Sudeep: ಮನೆ ಮುಂದೆ ಬಂದವರಿಗಾಗಿ ಬಿಲ್ಡಿಂಗ್ ಏರಿ ಕೈ ಬೀಸಿದ ಕಿಚ್ಚ ಸುದೀಪ್

Krishnaveni K
ಸೋಮವಾರ, 2 ಸೆಪ್ಟಂಬರ್ 2024 (09:20 IST)
Photo Credit: X
ಬೆಂಗಳೂರು: ಕನ್ನಡ ಚಿತ್ರರಂಗದ ಬಾದ್ ಶಹಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಇಂದು ಜನ್ಮದಿನದ ಸಂಭ್ರಮ. ಕಿಚ್ಚನ ಜನ್ಮದಿನ ಹಿನ್ನಲೆಯಲ್ಲಿ ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಅವರ ಮನೆ ಮುಂದೆ ಜಮಾಯಿಸಿದ್ದರು.

ಕಿಚ್ಚ ಸುದೀಪ್ ಮನೆ ಮುಂದಿನ ರಸ್ತೆಗಳೆಲ್ಲಾ ಮಧ್ಯರಾತ್ರಿಯಿಂದಲೇ ಜನಸಾಗರವಿತ್ತು. ತಮ್ಮನ್ನು ಕಾಣಲು ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು ನೋಡಿ ಬೇರೆ ವಿಧಿಯಲ್ಲದೇ ಸ್ವತಃ ಕಿಚ್ಚ ಸುದೀಪ್ ಮನೆಯಿಂದ ಹೊರಗೆ ಬಂದು ಬಿಲ್ಡಿಂಗ್ ಮೇಲೆ ನಿಂತು ಜನರತ್ತ ಕೈ ಬೀಸಿ ಧನ್ಯವಾದ ಸಲ್ಲಿಸಿದ್ದಾರೆ.

ಹಲವರು ಕಿಚ್ಚ ಸುದೀಪ್ ಗಾಗಿ ಉಡುಗೊರೆಗಳನ್ನೇ ತಂದಿದ್ದರು. ಸುದೀಪ್ ಭಾವಚಿತ್ರವಿರುವ ಬಾವುಟ ಹಿಡಿದು ಕಿಚ್ಚನಿಗೆ ಜೈಕಾರ ಕೂಗಿದರು. ಹುಟ್ಟುಹಬ್ಬ ದಿನವೇ ಸುದೀಪ್ ಜೊತೆ ಸೆಲ್ಫೀ ತೆಗೆಯಲು ಸಾಕಷ್ಟು ಜನ ನೂಕು ನುಗ್ಗಲು ನಡೆಸಿದರು. ಈ ಬಾರಿ ಅಭಿಮಾನಿಗಳೊಂದಿಗೇ ಸುದೀಪ್ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.

ಮೊನ್ನೆ ಪತ್ರಿಕಾಗೋಷ್ಠಿ ನಡೆಸಿದ್ದ ಸುದೀಪ್ ಮಧ್ಯರಾತ್ರಿ ಮನೆ ಹತ್ತಿರ ಬರಬೇಡಿ. ಇದರಿಂದ ಬೇರೆಯವರಿಗೂ ತೊಂದರೆಯಾಗಬಹುದು ಎಂದು ಮನವಿ ಮಾಡಿದ್ದರು. ಆದರೆ ಕಿಚ್ಚನ ಮನವಿಯನ್ನೂ ಲೆಕ್ಕಿಸದೇ ಅಭಿಮಾನಿಗಳು ಅವರಿಗೆ ವಿಶ್ ಮಾಡಲು ಬಂದಿದ್ದಾರೆ. ಕೊನೆಗೆ ಸುದೀಪ್ ಕೂಡಾ ಅವರಿಗಾಗಿ ಹೊರಬರಲೇಬೇಕಾಯಿತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ವಿಧಿವಶ

ಜಸ್ಟ್ ಫ್ರೆಂಡ್ಸ್ ಎನ್ನುತ್ತಲೇ ದಾಂಪತ್ಯ ಜೀವನಕ್ಕಿಡಲು ಸಜ್ಜಾದ ಮಾನಸ ಶಿವು ಜೋಡಿ

ಮುಂದಿನ ಸುದ್ದಿ
Show comments