Select Your Language

Notifications

webdunia
webdunia
webdunia
webdunia

ಟಾಲಿವುಡ್‌ನಲ್ಲಿ ಸೆಕೆಂಡ್ ಇನ್ನಿಂಗ್ಸ್‌ಗೆ ರೆಡಿಯಾದ ಖುಷ್ಬೂ

ಟಾಲಿವುಡ್‌ನಲ್ಲಿ ಸೆಕೆಂಡ್ ಇನ್ನಿಂಗ್ಸ್‌ಗೆ ರೆಡಿಯಾದ ಖುಷ್ಬೂ
Hyderabad , ಗುರುವಾರ, 29 ಡಿಸೆಂಬರ್ 2016 (14:06 IST)
ಖುಷ್ಬು ಸುಂದರ್ ಈಗ ಹಿರಿಯ ತಾರೆ. ಒಂದು ಕಾಲದಲ್ಲಿ ತಮ್ಮ ಮಾದಕ ಚೆಲುವಿನ ಮೂಲಕ ಚಿತ್ರರಸಿಕರ ಹೃದಯಸಿಂಹಾಸನ ಅಲಂಕರಿಸಿದ್ದ ಬೆಡಗಿ. ಈಗ ಸಿನಿಮಾಗಳಲ್ಲಿ ಅವರದೇನಿದ್ದರೂ ಪೋಷಕ ಪಾತ್ರಗಳಿಗೆ ಸೀಮಿತ. ಟಾಲಿವುಡ್‍ನಲ್ಲಿ ಸೆಕೆಂಡ್ ಇನ್ನಿಂಗ್ಸ್‌ಗೆ ರೆಡಿಯಾಗಿದ್ದಾರೆ ಖುಷ್ಬೂ.
 
ಪವರ್ ಸ್ಟಾರ್ ಪವನ್ ಕಲ್ಯಾಣ್ ಮುಖ್ಯಭೂಮಿಕೆಯ ’ಕಾಟಮರಾಯುಡು’ ಚಿತ್ರದ ಬಿಡುಗಡೆ ಹಂತದಲ್ಲಿದೆ. ಇದರ ನಂತರದ ಚಿತ್ರದಲ್ಲಿ ಖುಷ್ಬೂ ಪ್ರಮುಖ ಪಾತ್ರ ಪೋಷಿಸಲಿದ್ದಾರಂತೆ.  ಈ ಚಿತ್ರಕ್ಕೆ ತ್ರಿಕ್ರಮ್ ಶ್ರೀನಿವಾಸ್ ಆಕ್ಷನ್ ಕಟ್ ಹೇಳುತ್ತಿದ್ದು, ಈಗಾಗಲೆ ಅತಾರಿಂಟಿಕಿ ದಾರೇದಿ ಹಿಟ್ ಚಿತ್ರ ಕೊಟ್ಟಿರುವ ಕಾಂಬಿನೇಷನ್‌ನಿಂದ ಪ್ರೇಕ್ಷಕರು ಮತ್ತೊಂದು ಭರ್ಜರಿ ಸಿನಿಮಾ ನಿರೀಕ್ಷಿಸಿದ್ದಾರೆ.
 
ಸಾಮಾನ್ಯವಾಗಿ ತ್ರಿವಿಕ್ರಮ್ ಸಿನಿಮಾಗಳೆಂದರೆ ಕೌಟುಂಬಿಕ ಕಥಾಹಂದರ ಚಿತ್ರಗಳು. ಜಟಿಲ ಸಂಬಂಧಗಳು, ಪ್ರೀತಿ ಪ್ರೇಮ, ಅವಿಭಕ್ತ ಕುಟುಂಬ ಈ ರೀತಿಯ ಸಬ್ಜೆಕ್ಟ್‌ಗಳಿಗೆ ಹೇಳಿ ಮಾಡಿಸಿರುವ ನಿರ್ದೇಶಕ. ಈ ಬಾರಿ ನಿರ್ಣಾಯಕ ಪಾತ್ರಕ್ಕೆ ಖುಷ್ಬೂರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸ್ವತಃ ಈ ಸುದ್ದಿಯನ್ನು ಖುಷ್ಬು ಟ್ವೀಟ್ ಮಾಡಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ನಾಪ್‍ಡೀಲ್‍ನಿಂದ ರಿಲಯನ್ಸ್ ಜಿಯೋ ಸಿಮ್ ಹೋಂ ಡೆಲಿವರಿ