Select Your Language

Notifications

webdunia
webdunia
webdunia
webdunia

ಬಾಹುಬಲಿ ದಾಖಲೆಯನ್ನು ಮುರಿದ ’ಖೈದಿ’

ಬಾಹುಬಲಿ ದಾಖಲೆಯನ್ನು ಮುರಿದ ’ಖೈದಿ’
Bangalore , ಗುರುವಾರ, 12 ಜನವರಿ 2017 (20:53 IST)
ಬಾಹುಬಲಿ ಚಿತ್ರದ ದಾಖಲೆಯನ್ನು ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಖೈದಿ ನಂಬರ್ 150 ಅಳಿಸಿ ಹಾಕಿದೆ. ಒಂದೇ ದಿನದಲ್ಲಿ ಚಿತ್ರ ವಿಶ್ವದಾದ್ಯಂತ 47 ಕೋಟಿ ಕಲೆಕ್ಷನ್ ಮಾಡಿದೆ. ಈ ವಿಷಯವನ್ನು ಅಧಿಕೃತವಾಗಿ ನಿರ್ಮಾಪಕ ಅಲ್ಲು ಅರವಿಂದ್ ಪ್ರಕಟಿಸಿದ್ದಾರೆ.
 
ಸುಮಾರು ಹತ್ತು ವರ್ಷಗಳ ಗ್ಯಾಪ್ ಬಳಿಕ ಚಿರಂಜೀವಿ ಬಣ್ಣ ಹಚ್ಚಿರುವ ಚಿತ್ರ ಇದಾಗಿದ್ದು, ಚಿತ್ರಕ್ಕೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗೆ ಥ್ರಿಲ್ ಆಗಿದ್ದೇವೆ. ನಿಜಕ್ಕೂ ಇದೊಂದು ಅದ್ಭುತ. ನಮಗಂತೂ ತುಂಬಾ ಖುಷಿಯಾಗಿದೆ ಎಂದಿದ್ದಾರೆ ಅಲ್ಲು ಅರವಿಂದ್. 
 
ಬಾಹುಬಲಿ ಚಿತ್ರ ಮೊದಲ ದಿನ ರೂ.35 ಕೋಟಿ ಕಲೆಕ್ಷನ್ ಮಾಡಿತ್ತು. ಆದರೆ ಖೈದಿ ನಂಬರ್ 150 ಸುಮಾರು ರೂ.47 ಕೋಟಿ ವಸೂಲಿ ಮಾಡುವ ಮೂಲಕ ಆ ದಾಖಲೆಯನ್ನು ಮುರಿದಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಎರಡೂ ರಾಜ್ಯಗಳಲ್ಲಿ ಬೊಂಬಾಟ್ ಕಲೆಕ್ಷನ್ ಮಾಡಿದೆ ಚಿತ್ರ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ’ಚಕ್ರವರ್ತಿ’ ಹಾಡು ಯೂಟ್ಯೂಬಲ್ಲಿ ವೈರಲ್