Select Your Language

Notifications

webdunia
webdunia
webdunia
webdunia

ದಾಖಲೆ ಬೆಲೆಗೆ ಚಿರಂಜೀವಿ ಸಿನಿಮಾ ಕರ್ನಾಟಕ ವಿತರಣೆ ಹಕ್ಕು

ದಾಖಲೆ ಬೆಲೆಗೆ ಚಿರಂಜೀವಿ ಸಿನಿಮಾ ಕರ್ನಾಟಕ ವಿತರಣೆ ಹಕ್ಕು
Bangalore , ಮಂಗಳವಾರ, 27 ಡಿಸೆಂಬರ್ 2016 (12:57 IST)
ಟಾಲಿವುಡ್ ಚಿತ್ರಗಳಿಗೆ ಕರ್ನಾಟಕದಲ್ಲಿ ಒಳ್ಳೇ ಬೇಡಿಕೆ ಇರೋದು ಗೊತ್ತಿರುವ ಸಂಗತಿ. ಇಲ್ಲಿನ ಸಾಕಷ್ಟು ನಿರ್ಮಾಪಕರು ತೆಲುಗು ಮೂಲದವರಾಗಿರುವುದು ಇದಕ್ಕೆ ಒಂದು ಕಾರಣ ಇರಬಹುದೇನೋ. ಮೆಗಾಸ್ಟಾರ್ ಚಿರಂಜೀವಿ ಅವರ 150ನೇ ಸಿನಿಮಾ ಖೈದಿ ನಂಬರ್ 150ರ ವಿತರಣೆ ಹಕ್ಕುಗಳು ದಾಖಲೆ ಬೆಲೆಗೆ ಮಾರಾಟವಾಗಿವೆ.  
 
ಕರ್ನನಟಕ ವಿತರಣೆ ಹಕ್ಕುಗಳನ್ನು ಸುಮಾರು ರೂ.8.50 ಕೋಟಿ ಕೊಟ್ಟು ಕೊಳ್ಳಲು ಮುಂದಾಗಿದ್ದಾರೆ ಎಂಬ ಸುದ್ದಿ ಇದೆ. ಈ ಮೂಲಕ ಟಾಲಿವುಡ್ ಚಿತ್ರಗಳ ಡಿಮ್ಯಾಂಡ್ ಎಷ್ಟರ ಮಟ್ಟಿಗಿದೆ ಎಂಬುದನ್ನು ಊಹಿಸಿ. ಒಟ್ಟಾರೆ ಕನ್ನಡ ಚಿತ್ರಗಳಿಗಂತೂ ಭಾರಿ ಹೊಡೆತ ಕೊಡಲಿದೆ ಖೈದಿ ನಂಬರ್ 150 ಚಿತ್ರ.
 
ರಿಲೀಸ್‍ಗೂ ಮುನ್ನವೇ ದಾಖಲೆ ಬೆಲೆಗೆ ಸಿನಿಮಾ ವಿತರಣೆ ಹಕ್ಕುಗಳಿಗೆ ಭಾರಿ ಬೇಡಿಕೆ ಬಂದಿದೆ. ಸಾಕಷ್ಟು ವರ್ಷಗಳ ಗ್ಯಾಪ್ ಬಳಿಕ ಚಿರಂಜೀವಿ ಬಣ್ಣಹಚ್ಚಿರುವ ಚಿತ್ರ ಇದು. ತಮಿಳಿನ ಕತ್ತಿ ರೀಮೇಕ್ ಆಗಿರುವ ಈ ಚಿತ್ರದಲ್ಲಿ ಚಿರು ಡ್ಯಾನ್ಸ್ ಹೈಲೈಟ್ ಆಗಲಿದೆ. ಈ ವಯಸ್ಸಿ ಯಾವ ರೀತಿ ಸ್ಟೆಪ್ ಹಾಕಿರಬಹುದು ಮೆಗಾಸ್ಟಾರ್ ಎಂದು ಅಭಿಮಾನಿಗಳು ಕಾಯುವಂತಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

’ಮಾಸ್ತಿಗುಡಿ ದುರಂತ’ದ ಬಗ್ಗೆ ರವಿವರ್ಮ ಮೌನ ಮಾತಾದಾಗ