Daily Horoscope
✕

ನಟಿ ಕಾವ್ಯ ಶಾ ಅವರೊಂದಿಗೆ ಒಲಿದು ಬಂದಿದೆ ಕನ್ನಡದಲ್ಲಿ ಮತ್ತೊಂದು ಅವಕಾಶ

Webdunia
ಸೋಮವಾರ, 27 ಜೂನ್ 2016 (09:33 IST)
ಸ್ಯಾಂಡಲ್ ವುಡ್‌ನಲ್ಲಿ ಸದ್ಯ ಹೊಸಬರ ಅಲೆ ಜೋರಾಗಿದೆ. ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕರು ಕೂಡ ಜೈ ಅನ್ನುತ್ತಿದ್ದಾರೆ. ಹಾಗಾಗಿ ಹೊಸ ಪ್ರತಿಭೆಗಳು ಸದ್ಯ ಚಂದನವನದಲ್ಲಿ ಮಿಂಚುತ್ತಿವೆ. ಒಂದು ಸಿನಿಮಾದಲ್ಲಿ ಅಭಿನಯಿಸಿ ಗಮನ ಸೆಳೆದ್ರೆ ಅಂತಹವರಿಗೆ ಮತ್ತೆ ಮತ್ತೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಇದೀಗ ಆ ಸರದಿ ನಟಿ ಕಾವ್ಯ ಶಾ ಅವರದ್ದು.
ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ ಸಿನಿಮಾದಲ್ಲಿ ಯಶ್ ಅವರೊಂದಿಗೆ ಅಭಿನಯಿಸಿದ್ದ ಕಾವ್ಯ ಶಾ ಅವರ ಅಭಿನಯವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಇದೇ ಅಭಿನಯ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಅವಕಾಶವನ್ನು ತಂದುಕೊಟ್ಟಿದೆ.ಈಗಾಗಲೇ ತಮಿಳಿನ ತಾರಾಯಿ ತಪಟ್ಟಾಯಿ ಸಿನಿಮಾದಲ್ಲಿ ಅಭಿನಯಿಸಿರುವ ಕಾವ್ಯ ಶಾ ಇದೀಗ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ.ಅಂದ್ಹಾಗೆ ಕಾವ್ಯ ಅವರು ಸದ್ಯ ಅಭಿನಯಿಸುತ್ತಿರುವ ಕನ್ನಡ ಸಿನಿಮಾ ಮಾಲ್ಗುಡಿ ಸ್ಟೇಷನ್.  ಈ ಹಿಂದೆ ಚಾರ್ಲಿ ಸಿನಿಮಾವನ್ನು ನಿರ್ದೇಶನ ಮಾಡಿದ ನಿರ್ದೇಶಕ ಶಿವ ಅವರು ನಿರ್ದೇಶನ ಮಾಡುತ್ತಿರುವ ಸಿನಿಮಾವಿದು.
 
ಅಂದ್ಹಾಗೆ ಮಾಲ್ಗುಡಿ ಸ್ಟೇಷನ್ ಸಿನಿಮಾದಲ್ಲಿ ಕಾವ್ಯ ಶಾ ಅವರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರೋದು ನಟ ಚೇತನ್ ಚಂದ್ರ ಅವರಂತೆ.ಅಂದ್ಹಾಗೆ ಉಪೇಂದ್ರ  ಹಾಗೂ ಸುದೀಪ್ ಅವರು ಅಭಿನಯಿಸುತ್ತಿರುವ ಮುಕುಂದ ಮುರಾರಿ ಸಿನಿಮಾದಲ್ಲೂ ಕಾವ್ಯ ಶಾ ಅವರು ಅಭಿನಯಿಸುತ್ತಿದ್ದಾರಂತೆ. ಈ ಸಿನಿಮಾದಲ್ಲಿ ಕಾವ್ಯ ಅವರು ಪತ್ರಕರ್ತೆಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಇಂಗ್ಲಿಷ್ ಮಾತನಾಡಿದ್ರೂ ಬಿಗ್ ಬಾಸ್ ಸುಮ್ಮನಿರೋದು ಯಾಕೆ

ಮೋದಿ ಹೊಗಳಿದ್ದಕ್ಕೇ… ಅನಂತನಾಗ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಇಂಥಾ ಮಾತುಗಳೇ..

ಡಯಟ್ ನೆಪ ಹೇಳಿ ಗಣೇಶನ ಪ್ರಸಾದ ನಿರಾಕರಿಸಿದ ರಣಬೀರ್ ಕಪೂರ್: ಬೀಫ್ ಕೊಟ್ಟಿದ್ರೆ… ನೆಟ್ಟಿಗರ ಟ್ರೋಲ್ Video

ಕನ್ನಡದ ನಟನಾ ದಿಗ್ಗಜ ಅನಂತ್ ನಾಗ್‌ಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವ: ಪ್ರಧಾನಿ ಮೋದಿ ಶ್ಲಾಘನೆ

ಅಣ್ಣಾ ಹಾಗಲ್ಲ, ಹೀಗೆ ಮಾಡೋ…ಗಣೇಶನ ಪೂಜೆ ಮಾಡುವಾಗ ಎಡವಟ್ಟು ಮಾಡಿದ ಸಲ್ಮಾನ್ ಖಾನ್ ನೋಡಿ ತಂಗಿ ಮಾಡಿದ್ದೇನು ನೋಡಿ Video

ಮುಂದಿನ ಸುದ್ದಿ
Show comments