ಸಲ್ಮಾನ್ ಖಾನ್ ಅವರ ಸುಲ್ತಾನ್ ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್

Webdunia
ಸೋಮವಾರ, 27 ಜೂನ್ 2016 (09:28 IST)
ಸಲ್ಮಾನ್ ಖಾನ್ ಅಭಿನಯ ಸುಲ್ತಾನ್ ಸಿನಿಮಾದ ರಿಲೀಸ್‌ಗಾಗಿ ಅಭಿಮಾನಿಗಳು ಬಹು ದಿನಗಳಿಂದ ಕಾಯುತ್ತಲೇ ಇದ್ದಾರೆ. ಮುಂದಿನ ತಿಂಗಳು ಜುಲೈ 6 ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಈದ್ ಹಬ್ಬಕ್ಕೆ ಸಿನಿಮಾ ರಿಲೀಸ್ ಆಗುತ್ತಿರೋದರಿಂದ ಹಬ್ಬಕ್ಕೆ ಬಂಪರ್ ಖುಷಿ ಸಿಗಲಿದೆ ಅನ್ನೋ ಲೆಕ್ಕಾಚಾರದಲ್ಲಿದ್ದಾರೆ ಅಭಿಮಾನಿಗಳು.
ಇನ್ನು ಸೆನ್ಸಾರ್ ಬೋರ್ಡ್ ಕೂಡ ಸುಲ್ತಾನ್ ಸಿನಿಮಾವನ್ನು ವೀಕ್ಷಣೆ ಮಾಡಿದ್ದು ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ನೀಡಿ ಸಿನಿಮಾವನ್ನು ಎಲ್ವ ವರ್ಗದವರು ನೋಡಬಹುದು ಅಂತಾ ಹೇಳಿದೆ. ಇನ್ನು ಅಚ್ಚರಿಯ ವಿಚಾರ ಅಂದ್ರೆ ಸಿನಿಮಾದಲ್ಲಿನ ಯಾವುದೇ ಒಂದು ಸೀನ್ ನಲ್ಲಿಯೂ ಸೆನ್ಸಾರ್ ಬೋರ್ಡ್ ಒಂದೇ ಒಂದು ಕಟ್ ಮಾಡುವಂತೆ ಹೇಳಿಲ್ಲವಂತೆ. ಹಾಗಾಗಿ ಸಿನಿಮಾ ತಂಡ ಫುಲ್ ಖುಷಿಯಾಗಿದೆ. ಇನ್ನು ಕಳೆದ ವಾರ ರಿಲೀಸ್ ಆಗಿದ್ದ ಉಡ್ತಾ ಪಂಜಾಬ್ ಸಿನಿಮಾಕ್ಕೆ ಸೆನ್ಸಾರ್ ಬೋರ್ಡ್ 89 ಕಡೆ ಕತ್ತರಿ ಹಾಕುವಂತೆ ಹೇಳಿತ್ತು. ಇದೇ ಭಾರೀ ವಿವಾದಕ್ಕೆ ಕಾರಣವಾಗಿತ್ತು.ಆದ್ರೀಗ ಸುಲ್ತಾನ್ ಸಿನಿಮಾಕ್ಕೆ ಸೆನ್ಸಾರ್ ಎಲ್ಲೂ ಕೂಡ ಕತ್ತರಿ ಪ್ರಯೋಗ ಮಾಡದೇ ಇರೋದು ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಇನ್ನಷ್ಟು ಕುತೂಹಲವನ್ನು ಹೆಚ್ಚಿಸಿದೆ.
 
ಸುಲ್ತಾನ್ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಹಾಗೂ ಅನುಷ್ಕಾ ಶರ್ಮಾ ಅವರು ಜೊತೆಯಾಗಿ ಅಭಿನಯಿಸಿದ್ದಾರೆ. ಸಲ್ಮಾನ್ ಖಾನ್ ಅವರು ಸಿನಿಮಾದಲ್ಲಿ ಕುಸ್ತಿಪಟುವಾಗಿ ಕಾಣಿಸಿಕೊಂಡಿದ್ದಾರೆ.ಅಲಿ ಅಬ್ಬಾಸ್ ಜಾಫರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದು , ವಿಶಾಲ್ ಶೇಖರ್ ಅವರು ಸಂಗೀತ ಸಂಯೋಜಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗಿಲ್ಲಿ ನಟನಿಗೆ ಹೇಳಿದಂತೇ 10 ಲಕ್ಷ ಕೊಟ್ಟೇ ಬಿಟ್ರು ಕಿಚ್ಚ ಸುದೀಪ್

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ಉಗ್ರಂ ಮಂಜು

ಸ್ಮೃತಿ ಮಂಧಾನ ಮಾಜಿ ಗೆಳೆಯ ಪಾಲಾಶ್ ಮುಚ್ಚಲ್ ವಿರುದ್ಧ ಕೇಸ್ ದಾಖಲು

ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನ ನೋಡಿ ಸಿಎಂ ಸಿದ್ದರಾಮಯ್ಯ ಶಾಕ್

ಒಂದೇ ಒಂದು ಪೋಸ್ಟ್ ನಿಂದ ಗಂಡನ ಜೊತೆಗಿಲ್ವಾ ಎಂದವರಿಗೆ ಉತ್ತರ ಕೊಟ್ಟ ನಟಿ ಭಾವನಾ ಮೆನನ್

ಮುಂದಿನ ಸುದ್ದಿ
Show comments