Publish Date: Mon, 27 Jun 2016 (09:33 IST)
Updated Date: Mon, 27 Jun 2016 (09:46 IST)
ಸ್ಯಾಂಡಲ್ ವುಡ್‌ನಲ್ಲಿ ಸದ್ಯ ಹೊಸಬರ ಅಲೆ ಜೋರಾಗಿದೆ. ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕರು ಕೂಡ ಜೈ ಅನ್ನುತ್ತಿದ್ದಾರೆ. ಹಾಗಾಗಿ ಹೊಸ ಪ್ರತಿಭೆಗಳು ಸದ್ಯ ಚಂದನವನದಲ್ಲಿ ಮಿಂಚುತ್ತಿವೆ. ಒಂದು ಸಿನಿಮಾದಲ್ಲಿ ಅಭಿನಯಿಸಿ ಗಮನ ಸೆಳೆದ್ರೆ ಅಂತಹವರಿಗೆ ಮತ್ತೆ ಮತ್ತೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಇದೀಗ ಆ ಸರದಿ ನಟಿ ಕಾವ್ಯ ಶಾ ಅವರದ್ದು.
ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ ಸಿನಿಮಾದಲ್ಲಿ ಯಶ್ ಅವರೊಂದಿಗೆ ಅಭಿನಯಿಸಿದ್ದ ಕಾವ್ಯ ಶಾ ಅವರ ಅಭಿನಯವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಇದೇ ಅಭಿನಯ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಅವಕಾಶವನ್ನು ತಂದುಕೊಟ್ಟಿದೆ.ಈಗಾಗಲೇ ತಮಿಳಿನ ತಾರಾಯಿ ತಪಟ್ಟಾಯಿ ಸಿನಿಮಾದಲ್ಲಿ ಅಭಿನಯಿಸಿರುವ ಕಾವ್ಯ ಶಾ ಇದೀಗ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ.ಅಂದ್ಹಾಗೆ ಕಾವ್ಯ ಅವರು ಸದ್ಯ ಅಭಿನಯಿಸುತ್ತಿರುವ ಕನ್ನಡ ಸಿನಿಮಾ ಮಾಲ್ಗುಡಿ ಸ್ಟೇಷನ್. ಈ ಹಿಂದೆ ಚಾರ್ಲಿ ಸಿನಿಮಾವನ್ನು ನಿರ್ದೇಶನ ಮಾಡಿದ ನಿರ್ದೇಶಕ ಶಿವ ಅವರು ನಿರ್ದೇಶನ ಮಾಡುತ್ತಿರುವ ಸಿನಿಮಾವಿದು.
ಅಂದ್ಹಾಗೆ ಮಾಲ್ಗುಡಿ ಸ್ಟೇಷನ್ ಸಿನಿಮಾದಲ್ಲಿ ಕಾವ್ಯ ಶಾ ಅವರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರೋದು ನಟ ಚೇತನ್ ಚಂದ್ರ ಅವರಂತೆ.ಅಂದ್ಹಾಗೆ ಉಪೇಂದ್ರ ಹಾಗೂ ಸುದೀಪ್ ಅವರು ಅಭಿನಯಿಸುತ್ತಿರುವ ಮುಕುಂದ ಮುರಾರಿ ಸಿನಿಮಾದಲ್ಲೂ ಕಾವ್ಯ ಶಾ ಅವರು ಅಭಿನಯಿಸುತ್ತಿದ್ದಾರಂತೆ. ಈ ಸಿನಿಮಾದಲ್ಲಿ ಕಾವ್ಯ ಅವರು ಪತ್ರಕರ್ತೆಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.