ಬಾಲಿವುಡ್‌ನಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ನಟಿಯರಾದ ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ರಾಣಿ ಮುಖರ್ಜಿ ,ಜೆನಿಲಿಯಾ, ಕಾಜೋಲ್ ಮುಂತಾದವರೆಲ್ಲಾ ಈಗಾಗಲೇ ಮಕ್ಕಳು ಮನೆ ಅಂತಾ ಫುಲ್ ಬ್ಯುಸಿಯಾಗಿದ್ದಾರೆ. ಅಲ್ಲದೇ ಇತ್ತೀಚೆಗೆ ವಿವಾಹವಾದ ನಟಿಯರು ತಾಯಿಯಾಗುತ್ತಿರುವ ಶುಭ ಸುದ್ದಿಯನ್ನು ನೀಡುತ್ತಿದ್ದಾರೆ.ಆದ್ರೆ ನಟಿ ಕರೀನಾ ಕಪೂರ್ ಅವರು ಮಾತ್ರ ವಿವಾಹವಾಗಿ ಮೂರು ನಾಲ್ಕು ವರ್ಷವಾದ್ರೂ ಇನ್ನು ಯಾವುದೇ ಶುಭ ಸುದ್ದಿ ನೀಡಿಲ್ಲ.ಆದ್ರೀಗ ಕರೀನಾ ಕಪೂರ್ ಅವರು ತಾಯಿಯಾಗುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.
ಇತ್ತೀಚೆಗೆ ಸೈಫ್ ಆಲಿಖಾನ್ ಹಾಗೂ ಕರೀನಾ ಕಪೂರ್ ಅವರು ಹಾಲಿ ಡೇ ಟ್ರಿಪ್ ಹೋಗಿದ್ದರು. ಟ್ರಿಪ್ ಮುಗಿಸಿಕೊಂಡು ವಾಪಸ್ ಬರುತ್ತಿದ್ದಂತೆ ಕರೀನಾ ತಾಯಿಯಾಗುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು.ಆದ್ರೆ ಕರೀನಾ ಅವರು ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡರಲಿಲ್ಲ. ಆದ್ರೀಗ ಅವರು ತಾಯಿಯಾಗುತ್ತಿರೋದು ನಿಜ ಅಂತಿದ್ದಾರೆ ಕೆಲವವರು.ಅದಕ್ಕೆ ಕಾರಣ ಕೂಡ ಇದೆ. ಅದೇನಂದ್ರೆ ಕರೀನಾ ಅವರು ತಾಯಿಯಾಗುತ್ತಿದ್ದಾರೆ ಅನ್ನೋದು ಅವರನ್ನು ನೋಡಿದ್ರೇನೆ ಗೊತ್ತಾಗುತ್ತಿದೆ ಅಂತಾ ಹೇಳಲಾಗುತ್ತಿದೆ. ಅಲ್ಲದೇ ಅವರ ಹೊಟ್ಟೆಯೇ ಅವರು ಗರ್ಭಿಣಿ ಅನ್ನೋದನ್ನು ತೋರಿಸುತ್ತಿದೆ ಅಂತಿದ್ದಾರೆ ಬಾಲಿವುಡ್ ಮಂದಿ.
ಇನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕರೀನಾ ಕಪೂರ್ ಅವರ ಬಳಿ ಅವರು ತಾಯಿಯಾಗುತ್ತಿರೋದರ ಬಗ್ಗೆ ಪ್ರಶ್ನಿಸಿದಾಗ ಜನ ಯಾವಾಗಲೂ ಒಂದು ವಿಚಾರದ ಬಗ್ಗೆ ಬೇರೆ ಬೇರೆಯಾಗಿ ಮಾತನಾಡುತ್ತಾರೆ. ನನ್ನ ವಿಚಾರದಲ್ಲೂ ಹಾಗೇ ಆಗಿದೆ.ಆದ್ರೆ ಯಾವಾಗ ಏನ್ ಆಗಬೇಕೋ ಅದು ಆಗುತ್ತೆ. ಒಂದು ವೇಳೆ ಅದು ನಿಜವಾಗಿದ್ರೆ ನಾನು ಹಾಗೂ ಸೈಫ್ ಆಲಿಖಾನ್ ಅವರು ಖಂಡಿತವಾಗಿಯೂ ಮಾಧ್ಯಮದ ಮುಂದೆ ಹೇಳುತ್ತೇವೆ ಅಂತಾ ಅವರು ಒಗಟಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.