Webdunia - Bharat's app for daily news and videos

Install App

ಕಾಂತಾರ ಚಾಪ್ಟರ್ 1 ಚಿತ್ರೀಕರಣಕ್ಕೆಂದು ಕರೆದುಕೊಂಡು ಬಂದು ಮೋಸ: ಹೊಂಬಾಳೆ ಫಿಲಂಸ್ ವಿರುದ್ಧ ಆರೋಪ (video)

Krishnaveni K
ಸೋಮವಾರ, 11 ನವೆಂಬರ್ 2024 (16:13 IST)
ಕುಂದಾಪುರ: ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾ ಶೂಟಿಂಗ್ ಗೆಂದು ಜ್ಯೂನಿಯರ್ ಕಲಾವಿದರನ್ನು ಕರೆದುಕೊಂಡು ಬಂದು ದುಡ್ಡು ಕೊಡದೇ ನಡು ರಸ್ತೆಯಲ್ಲೇ ನಿಲ್ಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೋ ಆರ್ಡಿನೇಟರ್ ಗಳ ಅಸಡ್ಡೆಯಿಂದ ಈ ಅವಸ್ಥೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಾಂತಾರ ಚಾಪ್ಟರ್ 1 ಸಿನಿಮಾಗೆ ಜ್ಯೂನಿಯರ್ ಕಲಾವಿದರು ಬೇಕು. ಒಂದು ತಿಂಗಳ ಕೆಲಸವಿದೆ ಎಂದು ಕರೆಸಿಕೊಂಡು ಪೇಮೆಂಟ್ ಕೊಡದೇ, ಊಟವನ್ನೂ ಕೊಡದೇ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮಹಿಳೆಯರೂ ಸೇರಿದಂತೆ ಜ್ಯೂನಿಯರ್ ಕಲಾವಿದರನ್ನು ಮಧ್ಯರಾತ್ರಿ ನಡು ರಸ್ತೆಯಲ್ಲಿ ನಿಲ್ಲಿಸಲಾಗಿದೆ. ಐದು ದಿನ ದುಡಿಸಿಕೊಂಡು ದುಡ್ಡೂ ಕೊಡದೇ ಊಟವೂ ಕೊಡದೇ ಸತಾಯಿಸಿದ್ದಾರೆ. ಕನ್ನಡಿಗರು ಮಾತ್ರವಲ್ಲ, ಜ್ಯೂನಿಯರ್ ಕಲಾವಿದರ ಪೈಕಿ ಕೆಲವರು ಕೇರಳದಿಂದ ಬಂದ ಮಹಿಳೆಯರೂ ಇದ್ದರು.

ರೂಂ ಕೊಡದೇ, ದುಡ್ಡೂ ಕೊಡದೇ ಸತಾಯಿಸಿದ್ದಾರೆ. ನಮ್ಮ ಸಮಸ್ಯೆ ರಿಷಭ್ ಶೆಟ್ಟಿಗೆ ತಲುಪಬೇಕು ಎಂದು ಜ್ಯೂನಿಯರ್ ಕಲಾವಿದರು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಎಲ್ಲಾ ಕಲಾವಿದರಿಗೆ ಕೈ, ಕಾಲಿಗೆ ಗಾಯಗಳಾಗಿವೆ. ಆದರೆ ಅದಕ್ಕೆ ಚಿಕಿತ್ಸೆಯನ್ನೂ ಕೊಡಿಸಿಲ್ಲ ಎಂಬ ಆರೋಪ ಮಾಡಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲಂಸ್ ಗೆ ಇದೊಂದು ಮುಜುಗರದ ಸಂಗತಿಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಣಾ, ಪ್ರಿಯಾ ಆಚಾರ್ ಜೋಡಿಯಾ ಏಳುಮಲೆ ಸಿನಿಮಾದ ಮೊದಲ ಹಾಡು ರಿಲೀಸ್‌

ಪಾಳಯಂಕೊಟ್ಟೈನಲ್ಲಿ ಐಟಿ ಉದ್ಯೋಗಿಯ ಮರ್ಯಾದಾ ಹತ್ಯೆ ಆಘಾತಕಾರಿ: ಕಮಲ್ ಹಾಸನ್

ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ, ಪ್ರಥಮ್ ದೂರು ಬೆನ್ನಲ್ಲೇ ಎಸ್‌ ನಾರಾಯಣ ಕಮಿಷನರ್‌ ದೂರು

ಬಿಗ್ ಬಾಸ್ ಪ್ರಥಮ್ ಟ್ರೋಲ್: ಉಪವಾಸವಿದ್ರೂ ಇಷ್ಟು ಎನರ್ಜಿ ಇರುತ್ತಾ

ನಟ ಪ್ರಥಮ್‌ಗೆ ದರ್ಶನ್ ಫ್ಯಾನ್ಸ್‌ಯಿಂದ ಜೀವಬೆದರಿಕೆ: ಆರೋಪಿಗಳ ಪತ್ತೆಗೆ ಬಲೆ ಬೀಸಿದ ಖಾಕಿ

ಮುಂದಿನ ಸುದ್ದಿ
Show comments