Webdunia - Bharat's app for daily news and videos

Install App

ಕಾಂತಾರ ಅಧ್ಯಾಯ 1 ರ ಫಸ್ಟ್ ಲುಕ್ ಟೀಸರ್ ವಿಡಿಯೋ ಇಲ್ಲಿದೆ

Webdunia
ಸೋಮವಾರ, 27 ನವೆಂಬರ್ 2023 (12:36 IST)
Photo Courtesy: Twitter
ಬೆಂಗಳೂರು: ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಕಾಂತಾರ 2 ಅಥವಾ ಕಾಂತಾರ ಅಧ್ಯಾಯ 1 ಸಿನಿಮಾದ ಫಸ್ಟ್ ಲುಕ್ ಇದೀಗ ಬಿಡುಗಡೆಯಾಗಿದೆ.

ಹೊಂಬಾಳೆ ಫಿಲಂಸ್ ಇತ್ತೀಚೆಗಷ್ಟೇ ನವಂಬರ್ 27 ರಂದು ಫಸ್ಟ್ ಲುಕ್ ಮತ್ತು ಮುಹೂರ್ತ ಕಾರ್ಯಕ್ರಮವಿರುವುದಾಗಿ ಘೋಷಿಸಿತ್ತು. ಅದರಂತೆ ಇಂದು ಉಡುಪಿಯ ಆನೆಗುಡ್ಡೆ  ವಿನಾಯಕ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ಕಾರ್ಯಕ್ರ ನೆರವೇರಿದೆ.

ಅದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಫಸ್ಟ್ ಲುಕ್ ನೋಡಿ ಜನರಿಗೆ ಚಿತ್ರದ ಬಗ್ಗೆ ಮತ್ತಷ್ಟು ತಿಳಿಯಲು ಕುತೂಹಲವುಂಟಾಗಿದೆ. ಪಕ್ಕಾ ವಾರಿಯರ್ ನಂತೆ ಖಡ್ಗ ಹಿಡಿದು ನಿಂತಿರುವ ರಿಷಬ್ ಲುಕ್ ನೋಡಿ ಎಂಥವರ ಎದೆಯೂ ಕ್ಷಣ ಝಲ್ಲೆನಿಸುವಂತಿದೆ. ಫಸ್ಟ್ ಲುಕ್ ಜೊತೆಗೆ ಟೀಸರ್ ಕೂಡಾ ಬಿಡುಗಡೆಯಾಗಿದ್ದು, ರಿಷಬ್ ಶೆಟ್ಟಿ ಅವತಾರ ವಿಶಿಷ್ಟವಾಗಿದೆ.

ಟೀಸರ್ ನಲ್ಲಿ ಕಾಂತಾರ ಅಧ್ಯಾಯ 1 ರಲ್ಲಿ ರಿಷಬ್ ಕದಂಬರ ಕಾಲದ ಕತೆ ಹೇಳಲಿದ್ದಾರೆ. ಟೀಸರ್ ನಲ್ಲಿ ತೋರಿಸಿರುವ ಹಿನ್ನಲೆ ದೃಶ್ಯವೇ ವಿಶಿಷ್ಟವಾಗಿದೆ. ಹೀಗಾಗಿ ಕಾಂತಾರ ಅಧ್ಯಾಯ 1 ಕೂಡಾ ಮತ್ತೊಂದು ಇತಿಹಾಸ ಸೃಷ್ಟಿಸುವ ನಿರೀಕ್ಷೆಯಿದೆ.




ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮನೆಗೆ ಬಂದ ಜಗ್ಗೇಶ್‌ಗೆ ದುಬಾರಿ ವಾಚ್ ಗಿಫ್ಟ್ ಕೊಟ್ಟ ಶಿವರಾಜ್‌ಕುಮಾರ್ ದಂಪತಿ

ಗಣೇಶ ಹಬ್ಬದಂದೇ ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಮೊದಲ ಸಿನಿಮಾ ಔಟ್‌: ಜೈ ಜೈ ರಾಮ್ ಹಾಡಿಗೆ ಅಭಿಮಾನಿಗಳು ಫಿದಾ

Video: ವಿಜಯ್‌-ರಶ್ಮಿಕಾ ಅಭಿನಯದ ರಣಬಾಲಿ ಚಿತ್ರ ರಿಲೀಸ್‌ಗೆ ಡೇಟ್ ಫಿಕ್ಸ್: ಖಡಕ್‌ ಲುಕ್‌ ಅಬ್ಬರಿಸಲಿರುವ ದೇವರಕೊಂಡ

ಗಣೇಶ ಚತುರ್ಥಿಯಂದು ಡಾಲಿ ಮನೆಯಲ್ಲಿ ಡಬಲ್‌ ಸಂಭ್ರಮ: ವಿಶೇಷವಾಗಿ ಮಗ ಹೆಸರನ್ನು ರಿವಿಲ್‌ ಮಾಡಿದ ಧನಂಜಯ್‌

BIG BOSS KANNADA: ದೊಡ್ಮನೆ ಮನೆ ಪ್ರವೇಶಿಸದೆ ಫ್ಲೈಟ್ ಜರ್ನಿಯಲ್ಲೇ ಪ್ರಯಾಣ ಮುಗಿಸಿದ ಪ್ರಥಮಾ ಪ್ರಸಾದ್

ಮುಂದಿನ ಸುದ್ದಿ
Show comments