ಶೀಘ್ರದಲ್ಲೇ ದಿಗ್ವಿಜಯ ನ್ಯೂಸ್ ಚಾನೆಲ್ ಕಾರ್ಯಾರಂಭ

ಮಂಗಳವಾರ, 7 ಫೆಬ್ರವರಿ 2017 (10:09 IST)
ವಿಜಯವಾಣಿ ಪತ್ರಿಕೆ ವತಿಯಿಂದ ಹೊಚ್ಚ ಹೊಸ ಸುದ್ದಿವಾಹಿನಿ ದಿಗ್ವಿಜಯ ನ್ಯೂಸ್ ಲೋಗೋ ಲಾಂಚ್ ಆಗಿದೆ. ವಿಆರ್ ಎಲ್ ನ ಮಹತ್ವಾಕಾಂಕ್ಷೆಯ ದಿಗ್ವಿಜಯ ನ್ಯೂಸ್ ಚಾನೆಲ್ಲಿನ ಲೋಗೊ ಮತ್ತು ಸಿಗ್ನೇಚರ್ ಟ್ಯೂನನ್ನು ಕಾರ್ಯನಿರ್ವಾಹಕ ನಿರ್ದೇಶಕ ಆನಂದ ಸಂಕೇಶ್ವರ ಅವರು ಅನಾವರಣ ಮಾಡಿದ್ದಾರೆ.
 
ಈ ಹೊಸ ಚಾನೆಲ್ ಬಹುಶಃ ಫೆಬ್ರವರಿ 10ರಿಂದ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ವಿಜಯ ಸಂಕೇಶ್ವರ್ ಅವರು ಏನೇ ಮಾಡಿದರು ಎಲ್ಲವನ್ನೂ ಪಕ್ಕಾ ಪ್ಲಾನ್ ಪ್ರಕಾರವೆ ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.
 
ಕನ್ನಡದಲ್ಲಿ ಈಗಾಗಲೆ ಸಾಕಷ್ಟು ನ್ಯೂಸ್ ಚಾನೆಲ್‌ಗಳಿದ್ದು ಅವೆಲ್ಲಕ್ಕಿಂತ ದಿಗ್ವಿಜಯ ಚಾನೆಲ್ ಹೇಗೆ ಭಿನ್ನವಾಗಿರುತ್ತದೆ ಎಂಬ ಕುತೂಹಲ ಕನ್ನಡನಾಡಿನ ಜನತೆಗಿದೆ. ಕನ್ನಡದಲ್ಲಿ ಸದ್ಯಕ್ಕೆ 12 ನ್ಯೂಸ್ ಚಾನೆಲ್‌ಗಳಿದ್ದು, ಈಗ ದಿಗ್ವಿಜಯ ಸೇರಿದರೆ ಅವುಗಳ ಸಂಖ್ಯೆ 13 ಆಗುತ್ತದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತಾನು ಗರ್ಭಿಣಿ ಎಂಬುದನ್ನು ತೋರಿಸಿದ ಲಿಸಾ ಹೇಡನ್