Publish Date: Wed, 18 Jan 2017 (10:51 IST)
Updated Date: Wed, 18 Jan 2017 (10:54 IST)
ನಾನು ಅವನಲ್ಲ ಅವಳು ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿರೋ ಸಂಚಾರಿ ವಿಜಯ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ `ರಿಕ್ತ’ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ರಿಕ್ತ ಚಿತ್ರಕ್ಕೆ ಅಮೃತ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಸಿನಿಮಾ.
ಚಿತ್ರದ ಟ್ರೇಲರ್ ಪೋಸ್ಟರ್ ಸ್ಯಾಂಡಲ್‍ವುಡ್‍ನಲ್ಲಿ ಭರವಸೆ ಮೂಡಿಸಿದೆ. ಇನ್ನುಳಿದಂತೆ ಚಿತ್ರದ ಸಂಗೀತದ ಜವಾಬ್ದಾರಿ ವಹಿಸಿಕೊಂಡಿರುವುದು ರಿಕ್ಕಿ ಸೋನು. ರಿಕ್ತ ಚಿತ್ರದ ಮೂಲಕ ಸಂಚಾರಿ ವಿಜಯ್ ಗಾಯಕರಾಗಿಯೂ ಹೊರ ಹೊಮ್ಮಿರುವುದು ವಿಶೇಷ. ಅರುಣ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಸದ್ಯದ ಹಾರರ್ ಟ್ರೆಂಡ್‍ಗೆ ತಕ್ಕಂತೆ ರಿಕ್ತ ಸಿನಿಮಾ ತಯಾರಾಗಿದೆಯಂತೆ. ಒಟ್ಟಾರೆಯಾಗಿ ಯಾವುದೇ ಪಾತ್ರವನ್ನಾದರೂ ಆವಾಹಿಸಿಕೊಂಡು ಮಾಡುವ ಸಂಚಾರಿ ವಿಜಯ್ ದೆವ್ವವಾಗಿ ಕಾಡುವ ಪಾತ್ರವನ್ನು ಹೇಗೆ ನಿಭಾಯಿಸಿದ್ದಾರೆಂದು ನೋಡಲು ಪ್ರೇಕ್ಷಕರು ಕಾತರರಾಗಿದ್ದರು. ಹೀಗೆ ಕುತೂಹಲ ಕೆರಳಿಸಿದ್ದ ರಿಕ್ತ ಈ ವಾರ ತೆರೆ ಕಾಣುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.