Webdunia - Bharat's app for daily news and videos

Install App

ಹಾಡುಗಳೊಂದಿಗೆ ಚಿತ್ರೀಕರಣ ಮುಗಿಸಿಕೊಂಡ ಮೊಂಬತ್ತಿ

Webdunia
ಸೋಮವಾರ, 16 ಜನವರಿ 2017 (13:06 IST)
ಮೊಂಬತ್ತಿ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ.  ರವಿಕುಮಾರ್ ಹಾಗೂ ನಾಯಕಿ ರಚನಾ ಅಭಿನಯಿಸಿದ ‘ಕಣ್ಣ ರೆಪ್ಪೆ ಮುಚ್ಚಲು ನಿನ್ನದೇ ಧ್ಯಾನ' ಮತ್ತು `ಜಾರಿ ಹೋದಂತೆ ಮನಸೂರೆಯಾದಂಗೆ’ ಎಂಬ 2 ಹಾಡುಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು. 
 
ಇದಲ್ಲದೆ ಕಳೆದ ವಾರ ಕಂಠೀರವ ಸ್ಟುಡಿಯೋದಲ್ಲಿ ಹಾಕಿದ್ದ ಅದ್ಧೂರಿ ಸೆಟ್‍ನಲ್ಲಿ ಚಂದನ್‍ಶೆಟ್ಟಿ, ನಾಯಕನಟ ರವಿಕುಮಾರ್, ಅಕ್ಷಯ್ ಮತ್ತು ರಚನಾ ಅಭಿನಯಿಸಿದ ‘ಏನೇ ಬರಲಿ ಡ್ಯಾಮ್ ಐ ಡೋಂಟ್ ಕೇರ್’,  ‘ನಾನಾಡೋ ಮಾತುಗಳು ಎಲ್ಲಾ ಫೇರ್’ ಎಂಬ ಹಾಡುಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು. ಇದರೊಂದಿಗೆ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ.  
 
ಬೇಟೆ, ಅಂಗಾರಕ, ಯಾರದು ಚಿತ್ರಗಳನ್ನು ನಿರ್ದೇಶಿಸಿದ್ದ ಶ್ರೀನಿವಾಸ್ ಕೌಶಿಕ್ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಶ್ಯಾಂ ಸಿಂಧನೂರು ಛಾಯಾಗ್ರಹಣ, ಸತೀಶ್ ಬಾಬು ಸಂಗೀತ, ಸಂಜೀವರೆಡ್ಡಿ ಸಂಕಲನ, ಕೌರವ ವೆಂಕಟೇಶ್ ಸಾಹಸ, ರವಿಕುಮಾರ್ ಕಥೆ, ಜಾನಪದ ಸಾಹಿತ್ಯ ಮತ್ತು ಸಹನಿರ್ದೇಶನ ಇದೆ.
 
ಸುರೇಶ್ ಕಣ್ಣ ಸಹ ನಿರ್ಮಾಪಕರಾಗಿದ್ದು, ಕಂಬಿರಾಜ್, ಜಗ್ಗು ನೃತ್ಯ ನಿರ್ದೇಶನವಿದೆ. ರವಿಕುಮಾರ್, ನೀತು, ರಚನಾ, ಯತಿರಾಜ್, ಗಿರೀಶ್ ಜತ್ತಿ, ಪ್ರಭಾಕರ್ ಎಂ. ಸಂಗೀತ, ಚಂದ್ರಕಾಂತ್, ಮೈಕೋ ಶಿವು, ಮಾರುತಿರಾಜ್ ಇನ್ನು ಮುಂತಾದವರ ತಾರಾಬಳಗವಿದೆ. ಬ್ರೈಟ್‍ಕಟ್ ಸಿನಿ ಲಾಂಛನದಲ್ಲಿ ಪ್ರಭಾಕರ್ ಎಂ. ನಿರ್ಮಿಸುತ್ತಿರುವ ಮೊಂಬತ್ತಿ ಚಿತ್ರಕ್ಕೆ ಇತ್ತೀಚೆಗೆ, ಸಕಲೇಶಪುರ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments