Webdunia - Bharat's app for daily news and videos

Install App

ಹಳ್ಳಿಯಲ್ಲಿ ನವೀನ್ ಕೃಷ್ಣ ‘ಈ ಕಲರವ’

Webdunia
ಸೋಮವಾರ, 16 ಜನವರಿ 2017 (12:59 IST)
ಗ್ರಾಮೀಣ ಸೊಗಡಿನ ನೈಜಕಥೆ, ಹಾಸ್ಯ ಕಥಾಹಂದರ ಹೊಂದಿದರುವ ಚಿತ್ರ ’ಈ ಕಲರವ’. ಈ ಚಿತ್ರದಲ್ಲಿ ಪ್ರೀತಿ ಹಾಗೂ ಒಂದು ಸಾಮಾಜಿಕ ಸಮಸ್ಯೆಯನ್ನು ನಿರೂಪಿಸಲಾಗಿದೆ.  ಅದನ್ನು ಹಾಸ್ಯರೂಪದಲ್ಲಿ ಬಿಚ್ಚಿಡುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದೆ.  ಕೆ.ಆರ್. ನಗರದ ತಿಪ್ಪೂರು ಎಂಬ ಪುಟ್ಟಗ್ರಾಮದಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. 
 
ಇಡೀ ಚಿತ್ರ ಇದೊಂದೇ ಊರಿನಲ್ಲಿ ಚಿತ್ರಿತವಾಗಿರುವುದು ಚಿತ್ರದ ವಿಶೇಷ. ಎಂ.ಎಂ.ಜಿ. ಫಿಲಂಸ್ ಲಾಂಛನದಲ್ಲಿ ಎಂ.ಮಹದೇವಗೌಡ ಅವರು ನಿರ್ಮಿಸುತ್ತಿರುವ ‘ಈ ಕಲರವ’ ಎಂಬ ಚಿತ್ರಕ್ಕೆ ಈ ಹಿಂದೆ ಬಿ.ಕೊ. ಚಿತ್ರ ನಿರ್ದೇಶಿಸಿದ್ದ ಸಂದೀಪ್ ದಕ್ಷ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.  
 
ಈ ಚಿತ್ರಕ್ಕೆ ಪೀಟರ್ ಎಂ.ಜೋಸೆಫ್, ಹಾಗೂ ಪ್ರಕಾಶ್ ಬಾಬು ಸಂಗೀತ, ಕುಮಾರ್ ಜಿ - ಛಾಯಾಗ್ರಹಣ, ರವಿಚಂದ್ರನ್-ಸಂಕಲನ, ಸುಬ್ಬು, ಅಶೋಕ್-ಸಾಹಸ, ಧನುಕುಮಾರ್ - ನೃತ್ಯ ನಿರ್ದೇಶನ, ಸಂದೀಪ್‍ದಕ್ಷ್ - ಸಾಹಿತ್ಯ, ನಿಖಿಲ್ ನಾಚಪ್ಪ ಸಹನಿರ್ದೇಶನವಿದೆ. ನವೀನ್ ಕೃಷ್ಣ, ರೋಹಿಣಿ, ಭಾರಧ್ವಾಜ್, ಲಕ್ಷ್ಮೀ, ರಶ್ಮಿ, ಮೈಸೂರು ಶೋಭಾ, ನಿಹಾರಿಕಾ, ಮಹಾದೇವೇಗೌಡ, ಪದ್ದುಶೇಖರ್, ಸಂತೋಷ್, ಪ್ರಿಯ ಇನ್ನು ಮುಂತಾದವರ ತಾರಾಬಳಗವಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments