Webdunia - Bharat's app for daily news and videos

Install App

ಕಾಂತಾರ ಚಾಪ್ಟರ್1 ಬಗ್ಗೆ ಬಿಗ್ ಅಪ್ ಡೇಟ್: ಕೊನೆಗೂ ಆ ಗಳಿಗೆ ಬಂದೇ ಬಿಟ್ಟಿತು

Krishnaveni K
ಶುಕ್ರವಾರ, 19 ಸೆಪ್ಟಂಬರ್ 2025 (13:05 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ರಿಷಬ್ ಶೆಟ್ಟಿಯವರ ಕಾಂತಾರ ಚಾಪ್ಟರ್ 1 ಸಿನಿಮಾ ಬಗ್ಗೆ ಅಭಿಮಾನಿಗಳು ಬಹುದಿನಗಳಿಂದ ಕಾಯುತ್ತಿದ್ದ ಅಪ್ ಡೇಟ್ ಕೊನೆಗೂ ಬಂದೇ ಬಿಟ್ಟಿದೆ. ಟ್ರೈಲರ್ ಬಿಡುಗಡೆ ದಿನಾಂಕವನ್ನು ಹೊಂಬಾಳೆ ಫಿಲಂಸ್ ಅಧಿಕೃತವಾಗಿ ಪ್ರಕಟಿಸಿದೆ.

ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರಮಂದಿರಗಳಲ್ಲಿ, ಜನರಲ್ಲಿ ಕಾಂತಾರ ಕ್ರೇಜ್ ಶುರುವಾಗಿದೆ. ಆದರೆ ಚಿತ್ರತಂಡದಿಂದ ಯಾವುದೇ ಅಪ್ ಡೇಟ್ ಇಲ್ಲ ಎಂದು ಅಭಿಮಾನಿಗಳಲ್ಲಿ ಬೇಸರವಿತ್ತು.

ಇದೀಗ ಕಾಂತಾರ ಚಾಪ್ಟರ್ 1 ಟ್ರೈಲರ್ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಸೆಪ್ಟೆಂಬರ್ 22 ರಂದು 12.45 ಕ್ಕೆ ಟ್ರೈಲರ್ ಬಿಡುಗಡೆ ಮಾಡುತ್ತಿರುವುದಾಗಿ ಕಾಂತಾರ ಸಿನಿಮಾ ತಂಡ ಘೋಷಿಸಿದೆ.

ಕಾಂತಾರ ಅಧ್ಯಾಯ 1 ದರ್ಶನಕ್ಕೆ ಕ್ಷಣಗಣನೆ. ಇದೇ 22 ರಂದು ಮಧ್ಯಾಹ್ನ 12.45 ಕ್ಕೆ ಕಾಂತಾರ ಟ್ರೈಲರ್ ಬಿಡುಗಡೆ ಮಾಡಲಿದ್ದೇವೆ. ಹೊಂಬಾಳೆ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಟ್ರೈಲರ್ ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲಂಸ್ ಘೋಷಣೆ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಖ್ಯಾತ ಯೂಟ್ಯೂಬರ್ ಪತ್ನಿ ಬಸ್ ಡ್ರೈವರ್ ಜತೆ ಓಡಿ ಹೋದ ಪ್ರಕರಣಕ್ಕೆ ಹೊಸ ಟ್ವಿಸ್ಟ್‌

ತನ್ನ ಕಣ್ಣೆದುರೆ ಅಭಿಮಾನಿಗಳು ಮೇಲಿದ್ದ ಬಿದ್ದಾಗ ಯಶ್ ಹೇಗೆ ನಡೆದುಕೊಂಡ್ರು ನೋಡಿ, Video

ಯಶ್ ಸಿನಿಮಾ ಪ್ರಮೋಷನ್ ಕಾರ್ಯಕ್ರಮದಲ್ಲಿ ಇದೆಂಥಾ ಅವಘಡ, ಇಬ್ಬರು ಅಭಿಮಾನಿಗಳಿಗೆ ಗಾಯ

ಯಶ್ ಮನೆಯಲ್ಲಿಲ್ಲದಿದ್ದರೂ ಪೂಜೆ ಮಿಸ್ ಆಗದ ಹಾಗೆ ನೋಡಿಕೊಂಡ್ರು ರಾಧಿಕಾ ಪಂಡಿತ್

45ನೇ ವರ್ಷದಲ್ಲಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕರೀನಾ ಕಪೂರ್‌, ಈ ಚರ್ಚೆಗೆ ಕಾರಣ ಈ ವಿಡಿಯೋ

ಮುಂದಿನ ಸುದ್ದಿ
Show comments