Daily Horoscope
✕

ಕಾಂತಾರ ಚಾಪ್ಟರ್ 1 ಸಿನಿಮಾ ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ: ಆ ಸೀನ್ ಇಲ್ಲೂ ಇರುತ್ತಾ

Krishnaveni K
ಸೋಮವಾರ, 22 ಸೆಪ್ಟಂಬರ್ 2025 (08:56 IST)
ಬೆಂಗಳೂರು: ಸಿನಿ ಪ್ರಿಯರು ಬಹಳ ದಿನಗಳಿಂದ ಕಾಯುತ್ತಿದ್ದ ಕಾಂತಾರ ಚಾಪ್ಟರ್ 1 ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಲಿದೆ. ಈಗ ಎಲ್ಲರಿಗೂ ಆ ಒಂದು ಸೀನ್ ಇರುತ್ತಾ ಎನ್ನುವುದೇ ಕುತೂಹಲವಾಗಿದೆ.

ಕಾಂತಾರ ಚಾಪ್ಟರ್ 1 ಅಕ್ಟೋಬರ್ 2 ಕ್ಕೆ ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇಂದು ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲಂಸ್ ಈಗಾಗಲೇ ಘೋಷಿಸಿದೆ. ಮಧ್ಯಾಹ್ನ 12.45 ಕ್ಕೆ ಚಿತ್ರದ ಟ್ರೈಲರ್ ಹೊಂಬಾಳೆ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಕಾಂತಾರ ಮೊದಲ ಸಿನಿಮಾದ ಟ್ರೈಲರ್ ಬಿಡುಗಡೆಯಾದಾಗ ಜನ ಭಾರೀ ಸಂಖ್ಯೆಯಲ್ಲಿ ನೋಡಿ ಇಷ್ಪಟ್ಟಿದ್ದರು. ಟ್ರೈಲರ್ ನಿಂದಲೇ ಚಿತ್ರ ನೋಡಲು ಜನರಿಗೆ ಕುತೂಹಲವಾಗಿತ್ತು. ಯಾಕೆಂದರೆ ಅದಕ್ಕೆ ಟ್ರೈಲರ್ ನಲ್ಲಿದ್ದ ಭೂತಕೋಲದ ದೃಶ್ಯ.

ಈಗ ಕಾಂತಾರ ಚಾಪ್ಟರ್ 1 ಈಗಾಗಲೇ ಬಂದಿರುವ ಕತೆಯ ಪೂರ್ವಭಾಗದ ಕತೆ ಎನ್ನಲಾಗಿದೆ. ಇಲ್ಲಿ ದೈವಗಳ ಹುಟ್ಟು, ಮನುಷ್ಯ ಮತ್ತು ದೈವದ ನಡುವಿನ ಸಂಬಂಧ ಎಲ್ಲವನ್ನೂ ಹೇಳಲಾಗಿದೆ ಎನ್ನಲಾಗಿದೆ. ಹೀಗಾಗಿ ಇಲ್ಲೂ ಭೂತಕೋಲದ ಝಲಕ್ ನೋಡಲು ಸಿಗಬಹುದೇ ಎಂದೇ ಜನರ ನಿರೀಕ್ಷೆಯಾಗಿದೆ. ಇದೆಲ್ಲದಕ್ಕೂ ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ಎಂಥಾ ಅಭಿಮಾನಿಗಳೂ ಇರ್ತಾರಪ್ಪಾ.. ಬರ್ತ್ ಡೇಗೆ ವಿಶ್ ಮಾಡಲು ಬಂದು ರಚಿತಾ ರಾಮ್ ಗೆ ಅಭಿಮಾನಿ ಹೀಗೆ ಮಾಡೋದಾ

BBK13: ಕಳೆದ ವಾರ ಕಿಚ್ಚನ ಚಪ್ಪಾಳೆ.. ಆದ್ರೆ ಈ ವಾರ ಆಸಿಯಾಗೆ ಏನು ಕಿಚ್ಚನಿಂದ ಏನು ಕಾದಿದ್ಯೋ

ಬಿಗ್ ಸ್ಟಾರ್ಸ್‌ ಇಲ್ಲದಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಗಿಟ್ಟಿಸಿತು ಸಕ್ಸಸ್: ಪ್ರೇಮದ ಊರಲಿ ಚಿತ್ರಕ್ಕೆ ಪ್ರೇಕ್ಷಕರು ಫಿದಾ

BBK13: ನಿಯಮ ಮುರಿದ ಮೇಲೂ ಇಂಥಾ ಉದ್ಧಟತನವೇ.. ಯಶಸ್ ದುರಹಂಕಾರದ ವರ್ತನೆಗೆ ಪ್ರೇಕ್ಷಕರ ಛೀಮಾರಿ

Video: ಗೋವಾದಲ್ಲಿ ಪುರುಷನ್ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಅವಘಡ: ಕಾಲಿವುಡ್‌ ನಟ ವಿಶಾಲ್‌ ಬೆನ್ನಿಗೆ ಗಾಯ

ಮುಂದಿನ ಸುದ್ದಿ
Show comments