Webdunia - Bharat's app for daily news and videos

Install App

Kamal Hassan: ಕಮಲ್ ಹಾಸನ್ ಗೆ ಪಾಠ ಕಲಿಸಲು ಇದೊಂದು ಕೆಲಸ ಮಾಡಿದ್ರೆ ಸಾಕು

Krishnaveni K
ಸೋಮವಾರ, 2 ಜೂನ್ 2025 (10:13 IST)
ಬೆಂಗಳೂರು: ಥಗ್ ಲೈಫ್ ಸಿನಿಮಾ ಈವೆಂಟ್ ನಲ್ಲಿ ಕನ್ನಡಕ್ಕೆ ಅವಮಾನ ಮಾಡಿದ ಬಹುಭಾಷಾ ನಟ ಕಮಲ್ ಹಾಸನ್ ಗೆ ಪಾಠ ಕಲಿಸಬೇಕಾ? ಹಾಗಿದ್ದರೆ ಇದೊಂದು ಕೆಲಸ ಮಾಡಿದರೆ ಸಾಕು.

ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ವಿವಾದ ಸೃಷ್ಟಿಸಿದ್ದರು. ಅದೂ ಸಾಲದೆಂಬಂತೆ ಕನ್ನಡಿಗರ ಮನಸ್ಸಿಗೆ ನೋವಾಗಿದೆ ಎಂದು ತಿಳಿದರೂ ಕ್ಷಮೆ ಕೇಳುವ ಔದಾರ್ಯ ತೋರಿಲ್ಲ. ಬದಲಾಗಿ ನಾನು ತಪ್ಪು ಮಾಡಿಲ್ಲ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಲೇ ಇದ್ದಾರೆ.

ಇದೀಗ ಅವರ ಸಿನಿಮಾ ಥಗ್ ಲೈಫ್ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗುತ್ತಿಲ್ಲ. ಹಾಗಿದ್ದರೂ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬೇರೆ ಭಾಷೆಗಳಲ್ಲಾದರೂ ಸರಿ ಕಮಲ್ ಹಾಸನ್ ಸಿನಿಮಾ ಎಂಬ ಕಾರಣಕ್ಕೆ ನೋಡುವವರಿದ್ದಾರೆ.

ಒಂದು ವೇಳೆ ಕಮಲ್ ಹಾಸನ್ ಗೆ ಪಾಠ ಕಲಿಸಬೇಕೆಂದರೆ ಈ ಸಿನಿಮಾವನ್ನು ನೋಡದೇ ಕನ್ನಡಿಗರು ಅಸಹಾಕರ ತೋರಿದರೆ ಸಾಕು. ಇದು ಮಾತ್ರವಲ್ಲ, ಮುಂದೆ ಬರುವ ಕಮಲ್ ಹಾಸನ್ ಸಿನಿಮಾಗಳನ್ನು ಥಿಯೇಟರ್ ಇರಲಿ, ಒಟಿಟಿಯಲ್ಲಿರಲಿ ನೋಡದೇ ಇದ್ದರೆ ಅದುವೇ ಕನ್ನಡಿಗರು ಕಲಿಸಬಹುದಾದ ದೊಡ್ಡ ಪಾಠ ಎಂದು ಹಲವರು ಈಗ ಸೋಷಿಯಲ್ ಮೀಡಿಯಾಗಳಲ್ಲಿ ಅಭಿಪ್ರಾಯಪಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸು ಫ್ರಮ್ ಸೋ ಶೋ ಕಡಿಮೆಯಾಯ್ತು ಎಂದ ಪ್ರೇಕ್ಷಕರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು

ಸ್ಟಾರ್ ಗಳಿಲ್ಲದಿದ್ದರೂ ಮೊದಲ ದಿನವೇ ಸು ಫ್ರಮ್ ಸೋ ಸಿನಿಮಾ ಭರ್ಜರಿ ಕಲೆಕ್ಷನ್

ಥೈಲ್ಯಾಂಡ್ ನಿಂದ ವಾಪಸ್ ಆದ ದರ್ಶನ್ ಗೆ ವಿವಿಐಪಿ ಭದ್ರತೆ: video

ಆ ಕ್ಷಣ ಶಾಶ್ವತವಾಗಿ ಅಚ್ಚೊತ್ತಿದೆ: ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ತಂದೆ ಬಗ್ಗೆ ಶ್ರುತಿ ಹಾಸನ್ ಹೆಮ್ಮೆ

ಪೂಜಾ, ಕಿಶನ್ ಮದುವೆ ಬೆನ್ನಲ್ಲೇ ಆದಿ, ಭಾಗ್ಯಗೇ ಮದುವೆ ಮಾಡುವಂತೆ ಡೈರೆಕ್ಟರ್‌ಗೆ ಫ್ಯಾನ್ಸ್ ಬೇಡಿಕೆ

ಮುಂದಿನ ಸುದ್ದಿ
Show comments