Select Your Language

Notifications

webdunia
webdunia
webdunia
webdunia

ಬಹುಭಾಷಾ ನಟ ಕಮಲ್ ಹಾಸನ್‌ ಡಿಎಂಕೆ ಸೇರ್ಪಡೆ?

ಬಹುಭಾಷಾ ನಟ ಕಮಲ್ ಹಾಸನ್‌ ಡಿಎಂಕೆ ಸೇರ್ಪಡೆ?
ಚೆನ್ನೈ , ಗುರುವಾರ, 20 ಜುಲೈ 2017 (15:34 IST)
ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದ ಬಹುಭಾಷಾ ನಟ ಕಮಲ್ ಹಾಸನ್ ಡಿಎಂಕೆ ಪಕ್ಷ ಸೇರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
 
ಡಿಎಂಕೆ ಪಕ್ಷದ ಮುಖವಾಣಿಯಾದ ಮುರಸೋಲಿ ಡೈಲಿಯ ಪ್ಲ್ಯಾಟಿನಂ ವಾರ್ಷಿಕೋತ್ಸವದ ಆಚರಣೆಗೆ ಹಾಸನ್ ಹಾಜರಾಗಬಹುದು ಎಂದು ನಿರೀಕ್ಷಿಸಲಾಗಿದೆ. ಕಾರ್ಯಕ್ರಮಕ್ಕೆ ಹಾಜರಾಗುವ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಖಚಿತಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ. 
 
ಮುರಸೋಳಿ ಡೈಲಿ ವಾರ್ಷಿಕೋತ್ಸವದ ಆಚರಣೆಗಳು ಎರಡು ದಿನಗಳವರೆಗೆ ನಡೆಯುತ್ತವೆ. ಆಗಸ್ಟ್ 10 ರಂದು ಕಮಲ್ ಹಾಸನ್ ಭಾಗವಹಿಸಲಿದ್ದಾರೆ. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಕಾರ್ಯಕರ್ತರು ಆಗಸ್ಟ್ 11 ರಂದು ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
 
ಕಳೆದ ಕೆಲವು ದಿನಗಳ ಹಿಂದೆ, ಪಳನಿಸ್ವಾಮಿ ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕಮಲ್ ಹಾಸನ್ ಆರೋಪ ಮಾಡಿದ್ದರು. ಕಮಲ್ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಪಳನಿಸ್ವಾಮಿ ಅವರಿಗೆ ರಾಜಕೀಯ ಗೊತ್ತಿಲ್ಲ ಎಂದಿದ್ದರು. 
 
ಅವರು ನಟನೆಯನ್ನು ಮಾಡುತ್ತಿದ್ದಾರೆ. ರಾಜಕೀಯದ ಬಗ್ಗೆ ತಿಳಿದಿಲ್ಲ, ಅವರು ರಾಜಕೀಯಕ್ಕೆ ಬಂದಾಗ ಆರೋಪಗಳನ್ನು ಮಾಡಬಹುದು, ನಾವು ಅವರಿಗೆ ಸೂಕ್ತವಾದ ಪ್ರತಿಕ್ರಿಯೆಯನ್ನು ನೀಡುತ್ತೇವೆ ಎಂದು ಟಾಂಗ್ ನೀಡಿದ್ದರು. 
 
ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಮಲ್ ಹಾಸನ್, ಹಿಂದಿ ಭಾಷೆ ಹೇರಿಕೆ ಕುರಿತಂತೆ ನಾನು ಹೇಳಿಕೆ ನೀಡಿದಾಗಿನಿಂದಲೇ ನಾನು ಹವ್ಯಾಸಿ ರಾಜಕಾರಣಿಯಾಗಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕುರುಕ್ಷೇತ್ರದಲ್ಲಿ ಅಭಿಮನ್ಯುವಾಗಿ ನಿಖಿಲ್...