Webdunia - Bharat's app for daily news and videos

Install App

Kamal Haasan: ಕನ್ನಡಕ್ಕೆ ಅವಮಾನ ಮಾಡಿದ ಕಮಲ್ ಹಾಸನ್ ಸಿನಿಮಾಗೆ ತಕ್ಕ ಶಾಸ್ತಿ

Krishnaveni K
ಸೋಮವಾರ, 9 ಜೂನ್ 2025 (10:07 IST)
ಚೆನ್ನೈ: ಕನ್ನಡ ಭಾಷೆಗೆ ಅವಮಾನ ಮಾಡಿದ್ದ ಬಹುಭಾಷಾ ನಟ ಕಮಲ್ ಹಾಸನ್ ಗೆ ತಕ್ಕ ಶಾಸ್ತಿಯಾಗಿದೆ ಎನ್ನಬಹುದು. ಅವರ ಥಗ್ ಲೈಫ್ ಸಿನಿಮಾ ಕಲೆಕ್ಷನ್ ನೋಡಿದರೆ ಇದು ನಿಜವೆನಿಸುತ್ತದೆ.

ಕಮಲ್ ಹಾಸನ್ ಥಗ್ ಲೈಫ್ ಸಿನಿಮಾ ಜೂನ್ 5 ರಂದು ಕರ್ನಾಟಕ ಹೊರತುಪಡಿಸಿ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಈ ಸಿನಿಮಾ ಬಜೆಟ್ ಬರೋಬ್ಬರಿ 200 ಕೋಟಿ ರೂ. ಮೊದಲ ದಿನ ಹಾಗೂ ಹೀಗೂ 15 ಕೋಟಿ ಗಳಿಕೆ ಮಾಡಿದ್ದ ಸಿನಿಮಾ ಎರಡನೇ ದಿನಕ್ಕೇ ಗಳಿಕೆ ಒಂದಂಕಿಗೆ ಬಂದು ತಲುಪಿತ್ತು.

ಇದೀಗ ಇಷ್ಟು ದಿನದಲ್ಲಿ ಸಿನಿಮಾ ಗಳಿಸಿದ್ದು ಕೇವಲ 30 ಕೋಟಿ. ಅಂದರೆ ಒಟ್ಟು ಬಜೆಟ್ ನ ಶೇ.15 ರಷ್ಟು ಮಾತ್ರ. ಸಿನಿಮಾಗೆ ಬರುತ್ತಿರುವ ರೆಸ್ಪಾನ್ಸ್ ನೋಡಿದರೆ ಬಂಡವಾಳದ ಅರ್ಧ ಪಾಲೂ ಬರುವ ಸಾಧ್ಯತೆ ಕಾಣುತ್ತಿಲ್ಲ. ಬಹುಶಃ ಕರ್ನಾಟಕದಲ್ಲಿ ಬಿಡುಗಡೆಯಾಗಿದ್ದರೆ ಸಿನಿಮಾ ಗಳಿಕೆ ಇನ್ನೂ ಸ್ವಲ್ಪ ಹೆಚ್ಚಾಗಬಹುದಿತ್ತೇನೋ.

ಆದರೆ ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂದಿದ್ದು ಮಾತ್ರವಲ್ಲದೆ, ಅದನ್ನು ಸಮರ್ಥಿಸಿಕೊಂಡು ಕ್ಷಮೆ ಕೇಳುವ ಔದಾರ್ಯವನ್ನೂ ತೋರದೇ ಕಮಲ್ ಹಾಸನ್ ಉದ್ದಟತನ ತೋರಿದ್ದರು. ಇದೀಗ ಅವರ ಸಿನಿಮಾ ತೋಪೆದ್ದು ಹೋಗುವ ಲಕ್ಷಣ ಕಾಣುತ್ತಿದೆ.  ವೀಕೆಂಡ್ ನಲ್ಲೂ ಗಳಿಕೆ ಹೆಚ್ಚಾಗಿಲ್ಲ. ಜನರಿಂದಲೂ ಸಿನಿಮಾ ಬಗ್ಗೆ ನೆಗೆಟಿವ್ ಕಾಮೆಂಟ್ ಗಳು ಬಂದಿದ್ದೇ ಹೆಚ್ಚು. ಹೀಗಾಗಿ ಕನ್ನಡದ ಬಗ್ಗೆ ಕಾಮೆಂಟ್ ಮಾಡಿದ್ದ ಕಮಲ್ ಗೆ ತಕ್ಕ ಶಾಸ್ತಿಯಾಗಿದೆ ಎಂದು ಕನ್ನಡಿಗರು ಆಡಿಕೊಳ್ಳುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪ್ರಥಮ್ ನಡೆದುಕೊಂಡ ರೀತಿ ಸರಿಯಲ್ಲ, ನಾನು ದರ್ಶನ್ ಪರ ನಿಲ್ಲುತ್ತೇನೆ: ನಟ ಧ್ರುವ ಸರ್ಜಾ

₹1000 ಕೋಟಿ ಸಾಲ ಕೊಡುವುದಾಗಿ ₹5ಕೋಟಿ ವಂಚನೆ: ನಟ ಎಸ್‌ ಶ್ರೀನಿವಾಸನ್‌ ಅರೆಸ್ಟ್‌

ಕೇರಳ ಸುಳ್ಳು ಪೋಕ್ಸೋ: 9ತಿಂಗ್ಳು ಜೈಲಿನಲ್ಲಿ ಕಳೆದ ವೃದ್ಧ, ಆಗಿದ್ದೇನು ಗೊತ್ತಾ

ರಮ್ಯಾ ಪೋಸ್ಟ್ ಗೆ ನೋ ಕಾಮೆಂಟ್ಸ್: ಸೈಲೆಂಟ್ ಆದ ಡಿಬಾಸ್ ಫ್ಯಾನ್ಸ್

ಮನುಷ್ಯರು ಬಣ್ಣ ಬದಲಾಯಿಸಿದರೇನು.. ದರ್ಶನ್ ಗೆ ಟಾಂಗ್ ಕೊಟ್ಟರಾ ಪವಿತ್ರಾ ಗೌಡ

ಮುಂದಿನ ಸುದ್ದಿ
Show comments