Select Your Language

Notifications

webdunia
webdunia
webdunia
webdunia

ನಾನೂ ರಜನಿಕಾಂತ್ ಜೊತೆಯಾಗಿ ಅಭಿನಯಿಸುತ್ತೇವೆ: ಕಮಲ್

ನಾನೂ ರಜನಿಕಾಂತ್ ಜೊತೆಯಾಗಿ ಅಭಿನಯಿಸುತ್ತೇವೆ: ಕಮಲ್
Chennai , ಬುಧವಾರ, 25 ಜನವರಿ 2017 (13:01 IST)
ಇವರಿಬ್ಬರೂ ಜೊತೆಯಾಗಿ ಅಭಿನಯಿಸಿದರೆ ಬಾಕ್ಸ್ ಆಫೀಸ್ ಉಡೀಸ್ ಆಗುವುದಂತೂ ಖಚಿತ. ಇವರಿಬ್ಬರೊಂದಿಗೆ ಸಿನಿಮಾ ತೆಗೆಯಲು ನಿರ್ಮಾಪಕರು ಕ್ಯೂ ನಿಲ್ಲುತ್ತಾರೆ. ಅವರಿಬ್ಬರು ಬೇರಾರು ಅಲ್ಲ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಸಕಲಕಲಾ ವಲ್ಲಭ ಕಲಮ್ ಹಾಸನ್.
 
ಹೌದು ಕಮಲ್ ಮತ್ತು ರಜನಿ ಒಂದೇ ಫ್ರೇಮ್‍ನಲ್ಲಿ ಕಾಣಿಸಿಕೊಂಡು ಬಹಳ ವರ್ಷಗಳಾಗಿವೆ. ಅವರಿಬ್ಬರೂ ಜೊತೆಯಾಗಿ ಅಭಿನಯಿಸಿದರೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಬಯಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಒಟ್ಟಿಗೆ ಅಭಿನಯಿಸುತ್ತೇವೆಂದು ಕಮಲ್ ಹಾಸನ್ ಹೇಳಿದ್ದಾರೆ.
 
ಜಲ್ಲಿಕಟ್ಟು ವಿವಾದ ತಮಿಳುನಾಡಿನಲ್ಲಿ ಭುಗಿಲೆದ್ದಿದ್ದು ಈ ಹಿನ್ನೆಲೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಕಮಲ್, ಎಲ್ಲಾ ಪ್ರಶ್ನೆಗಳೂ ಸಮಾಧಾನದಿಂದ ಉತ್ತರ ಕೊಡುತ್ತಿದ್ದರು. ರಜನಿ ಮತ್ತು ನಾನು ಅಭಿನಯಿಸುತ್ತೇವೆ. ಆದರೆ ನಮ್ಮಿಬ್ಬರನ್ನು ಯಾರು ಭರಿಸುತ್ತಾರೀ ಎಂದು ಉತ್ತರ ಕೊಟ್ಟಿದ್ದಾರೆ.
 
1975ರಲ್ಲಿ ಅಪೂರ್ವ ರಾಗಂಗಳ್ ಸಿನಿಮಾದಲ್ಲಿ ಇವರಿಬ್ಬರೂ ಅಭಿನಯಿಸಿದ್ದಾರೆ. 1985ರಲ್ಲಿ ಗಿರಫ್ತಾರ್ ಚಿತ್ರದಲ್ಲಿ ಕೊನೆಯದಾಗಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಅಮಿತಾಭ್ ಸಹ ಅಭಿನಯಿಸಿದ್ದಾರೆ.  ಆ ಬಳಿಕ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳಲೇ ಇಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿಚ್ಛೇದನದ ಬಳಿಕ...ನಾವಿಬ್ಬರೂ ಸ್ನೇಹಿತರು