Select Your Language

Notifications

webdunia
webdunia
webdunia
webdunia

ವಿಚ್ಛೇದನದ ಬಳಿಕ...ನಾವಿಬ್ಬರೂ ಸ್ನೇಹಿತರು

ವಿಚ್ಛೇದನದ ಬಳಿಕ...ನಾವಿಬ್ಬರೂ ಸ್ನೇಹಿತರು
Mumbai , ಬುಧವಾರ, 25 ಜನವರಿ 2017 (12:57 IST)
ಬಾಲಿವುಡ್ ನಟ ಹೃತಿಕ್ ರೋಷನ್ ಅವರ 17 ವರ್ಷಗಳ ದಾಂಪತ್ಯ ಜೀವನ 2014ರಲ್ಲಿ ಕೊನೆಯಾಯಿತು. ತನ್ನ ಪತ್ನಿ ಸುಸಾನೆ ಖಾನ್‌ಗೆ ವಿಚ್ಛೇದನ ಕೊಟ್ಟಿದ್ದು ಗೊತ್ತೇ ಇದೆ. ತನ್ನಿಬ್ಬರು ಮಕ್ಕಳನ್ನು ಹೃತಿಕ್ ತನ್ನ ಬಳಿಯೇ ಉಳಿಸಿಕೊಂಡಿದ್ದಾರೆ. 
 
ಸಾಮಾನ್ಯವಾಗಿ ವಿಚ್ಛೇದನದ ಬಳಿಕ ಗಂಡಹೆಂಡತಿ ಬೇರೆಬೇರೆಯಾಗಿ ಅವರವರ ಬದುಕು ಅವರು ಕಟ್ಟಿಕೊಳ್ಳುತ್ತಾರೆ. ಕೆಲ ವರ್ಷಗಳಿಂದ ಹೃತಿಕ್ ಮತ್ತು ಸುಸಾನೆ ಹಾಗೆಯೇ ಜೀವಿಸುತ್ತಿದ್ದಾರೆ. ಇತ್ತೀಚೆಗೆ ಹೃತಿಕ್ ತನ್ನ ಮಾಜಿ ಪತ್ನಿಯನ್ನು ಭೇಟಿಯಾಗುವುದು, ಮಕ್ಕಳೊಂದಿಗೆ ಪ್ರವಾಸ ಹೊರಡುವುದನ್ನು ನೋಡಿದ ಕೆಲವರು ಮತ್ತೆ ಈ ಜೋಡಿ ಒಂದಾಗುತ್ತಿದೆ ಎಂದೇ ಭಾವಿಸಿದ್ದಾರೆ. 
 
ಈ ಬಗ್ಗೆ ವಿವರಣೆ ನೀಡಿರುವ ಹೃತಿಕ್, ನಾವಿಬ್ಬರೂ ನಮ್ಮ ಮಕ್ಕಳಿಗೆ ಒಳ್ಳೆಯ ತಂದೆತಾಯಿ. ಇನ್ನು ನಮ್ಮಿಬ್ಬರ ವಿಷಯಕ್ಕೆ ಬಂದರೆ..ಕೇವಲ ಸ್ನೇಹಿತರಷ್ಟೆ. ನಮ್ಮಿಬ್ಬರ ನಡುವೆ ಪ್ರಶಾಂತವಾದ ಸಂಬಂಧವಿದೆ. ನನ್ನ ಜೀವನದಲ್ಲಿ ಸಮಸ್ಯೆಗಳೊಂದಿಗೆ ಕೂಡಿರುವ ಸಂಬಂಧಗಳು ಯಾವುದೂ ಇಲ್ಲ... ಎಂದಿದ್ದಾರೆ.
 
ಇನ್ನು ಎರಡನೇ ಮದುವೆ ಮಾಡಿಕೊಳ್ಳುವ ಬಗ್ಗೆ ಏನಾದರೂ ಯೋಚಿಸಿದ್ದೀರಾ ಎಂಬ ಪ್ರಶ್ನೆಗೆ...ನನಗೆ ಆ ಆಲೋಚನೆ ಇಲ್ಲ. ಸದ್ಯಕ್ಕೆ ನಾನು ತುಂಬಾ ಸಂತೋಷವಾಗಿದ್ದೇನೆ. ಈಗ ವಿವಾಹ ನನಗೆ ಅಗತ್ಯ ಎಂದು ಅನ್ನಿಸುತ್ತಿಲ್ಲ. ಆದರೆ ಭವಿಷ್ಯತ್ತಿನಲ್ಲಿ ಏನಾಗುತ್ತದೋ ನಮಗೆ ಗೊತ್ತಿಲ್ಲ. ಸದ್ಯಕ್ಕೆ ನಾನು ಎಲ್ಲ ವಿಧದಲ್ಲೂ ತೃಪ್ತಿಯಾಗಿದ್ದೇನೆ ಎಂದಿದ್ದಾರೆ ಹೃತಿಕ್. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ವಾರದ ಸೂಪರ್ ಜೋಡಿಯಲ್ಲಿ “ಮಲ್ಲಯುದ್ಧ”