Select Your Language

Notifications

webdunia
webdunia
webdunia
webdunia

ರಾಜಕಾರಣಿ ಜೊತೆ ಕಾಜಲ್ ಅಗರವಾಲ್ ಡೇಟಿಂಗ್?

ರಾಜಕಾರಣಿ ಜೊತೆ ಕಾಜಲ್ ಅಗರವಾಲ್ ಡೇಟಿಂಗ್?
Hyderabad , ಬುಧವಾರ, 7 ಡಿಸೆಂಬರ್ 2016 (14:02 IST)
ದಕ್ಷಿಣದಲ್ಲಿ ಮಿಂಚುತ್ತಿರುವ ಬ್ಯೂಟಿ ಕಾಜಲ್ ಅಗರವಾಲ್. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ತಾರೆ. ಇದೀಗ ಅವರ ಅಭಿಮಾನಿಗಳ ಹೃದಯ ಚೂರುಚೂರಾಗುವಂತ ಸುದ್ದಿಯೊಂದು ಬಂದಿದೆ. 
 
ಇತ್ತೀಚೆಗೆ ತೆಲುಗಿನಲ್ಲಿ "ಪಕ್ಕಾ ಲೋಕಲ್" ಅಂತ ಸೊಂಟ ಬಳುಕಿಸಿದ್ದರು. ಮೂಲಗಳ ಪ್ರಕಾರ ಕಾಜಲ್ ತೆಲುಗಿನ ಜನಪ್ರಿಯ ರಾಜಕಾರಣಿ ಜೊತೆ ಡೇಟಿಂಗ್ ಮಾಡ್ತಿದ್ದಾರಂತೆ. ಅಷ್ಟೇ ಅಲ್ಲ ಇವರ ಡೇಟಿಂಗ್ ಇನ್ನೂ ಸ್ವಲ್ಪ ಮುಂದೆ ಹೋಗಿದ್ದು ಮದುವೆತನಕ ಬಂದು ನಿಂತಿದೆಯಂತೆ.
 
ಆದರೆ ಆ ರಾಜಕಾರಣಿ ಯಾರು ಎಂಬುದು ಮಾತ್ರ ರಹಸ್ಯವಾಗಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಮದುವೆ ಬಗ್ಗೆಯೂ ಪ್ರಸ್ತಾಪಿಸಿದ್ದರು. ಮದುವೆ ಆದ ಮೇಲೆ ಚಿತ್ರರಂಗ ತೊರೆಯುವುದಾಗಿ ಹೇಳಿದ್ದರು. ಅಧಿಕೃತವಾಗಿ ಮದುವೆ ಸುದ್ದಿ ಹೊರಬೀಳುವುದು ಮಾತ್ರ ಬಾಕಿ ಇದೆ.
 
ಸದ್ಯಕ್ಕೆ ಮೆಗಾಸ್ಟಾರ್ ಚಿರಂಜೀವಿ ಜೊತೆ ಖೈದಿ ನಂಬರ್ 150 ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರಾಣದಗ್ಗುಬಾಟಿ ಜೊತೆಗಿನ ಚಿತ್ರವೊಂದರಲ್ಲೂ ಅವರು ಅಭಿನಯಿಸುತ್ತಿದ್ದು, ಸದ್ಯಕ್ಕೆ ಅವರ ಕೈಯಲ್ಲಿರುವ ಪ್ರಾಜೆಕ್ಟ್‌ಗಳಿಷ್ಟು. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಅಸ್ವಸ್ಥ