ಕಾಟೇರ ಗಳಿಕೆ: 100 ಕೋಟಿಗೆ ಇನ್ನು ಕೆಲವೇ ಹೆಜ್ಜೆ ಬಾಕಿ

Webdunia
ಮಂಗಳವಾರ, 2 ಜನವರಿ 2024 (13:37 IST)
ಬೆಂಗಳೂರು: ನಟ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದು, 100 ಕೋಟಿ ಗಳಿಕೆ ಕ್ಲಬ್ ಸೇರುವತ್ತ ದಾಪುಗಾಲಿಟ್ಟಿದೆ.

ಡಿಸೆಂಬರ್ 29 ಕ್ಕೆ ಬಿಡುಗಡೆಯಾದ ಸಿನಿಮಾ ಈಗ ನಾಲ್ಕು ದಿನಗಳಲ್ಲಿ 75 ಕೋಟಿ ರೂ ಬಾಚಿಕೊಂಡಿದೆ. ಇನ್ನು 25 ಕೋಟಿ ಗಳಿಕೆ ಮಾಡಿದರೆ ಸಿನಿಮಾ 100 ಕೋಟಿ ಗಳಿಕೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಬಳಿಕ ಕೇವಲ ಕನ್ನಡದಲ್ಲಿ ಬಿಡುಗಡೆಯಾದ ಸಿನಿಮಾವೊಂದು 100 ಕೋಟಿ ಗಳಿಕೆ ಮಾಡುತ್ತಿರುವ ವಿಶೇಷ ಹೆಗ್ಗಳಿಕೆ ಕಾಟೇರ ಸಿನಿಮಾದ್ದಾಗಲಿದೆ.

ಈ ಮೂಲಕ ದರ್ಶನ್ ತಾನು ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಮತ್ತೊಮ್ಮೆ ನಿರೂಪಿಸಿದ್ದಾರೆ. ಚಿತ್ರದ ಬಗ್ಗೆ ಪಾಸಿಟಿವ್ ವಿಮರ್ಶೆಗಳು ಬಂದಿದ್ದೂ ಈ ಯಶಸ್ಸಿಗೆ ಮತ್ತೊಂದು ಪ್ರಮುಖ ಕಾರಣವಾಯಿತು. ಮೊದಲ ದಿನ ಸಿನಿಮಾ 19.75 ಕೋಟಿ ರೂ. ಗಳಿಸಿತ್ತು. ಭಾನುವಾರ 20 ಕೋಟಿ ಕಲೆಕ್ಷನ್ ದಾಟಿತ್ತು. ನಿನ್ನೆ ಜನವರಿ 1 ಹೊಸ ವರ್ಷದ ಮೊದಲ ದಿನ ಚಿತ್ರದ ಗಳಿಕೆ 18 ಕೋಟಿ ರೂ. ದಾಟಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದೈವಕ್ಕೆ ಅಪಮಾನ ಮಾಡಿದ್ದಕ್ಕೆ ಕೊನೆಗೂ ಕ್ಷಮೆ ಕೇಳಿದ ರಣವೀರ್ ಸಿಂಗ್

ಸಮಂತಾ ರುತ್ ಪ್ರಭು ಕೈಹಿಡಿದ ರಾಜ್ ನಿಡಿಮೋರು ಬಗ್ಗೆ ತಿಳಿದಿರದ ಇನ್ನಷ್ಟು ಮಾಹಿತಿ

ಸಮಂತಾ ಜತೆಗೆ ಮದುವೆ ಬೆನ್ನಲ್ಲೇ ರಾಜ್ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಮದುವೆ ದಿನ ಸಮಂತಾ ಪತಿ ರಾಜ್ ನಿಡಿಮೋರು ಬಗ್ಗೆ ಈ ವಿಚಾರ ಹೆಚ್ಚು ಹುಡುಕಾಟ

ದರ್ಶನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಚಾಲೆಂಜಿಂಗ್‌ ಸ್ಟಾರ್‌ ಧ್ವನಿಯಲ್ಲೇ ಡೆವಿಲ್ ಟ್ರೇಲರ್ ದಿನಾಂಕ ರಿವಿಲ್‌

ಮುಂದಿನ ಸುದ್ದಿ
Show comments