Publish Date: Mon, 08 Jan 2024 (11:40 IST)
Updated Date: Mon, 08 Jan 2024 (11:47 IST)
ಹೈದರಾಬಾದ್: ಜ್ಯೂ.ಎನ್ ಟಿಆರ್ ನಾಯಕರಾಗಿರುವ ಬಹು ನಿರೀಕ್ಷಿತ ದೇವರ ಸಿನಿಮಾ ಟೀಸರ್ ಇಂದು ಬಿಡುಗಡೆಯಾಗುತ್ತಿದ್ದು, ಫ್ಯಾನ್ಸ್ ಕುತೂಹಲದಿಂದ ಕಾಯುತ್ತಿದ್ದಾರೆ.
ದೇವರ ಫಸ್ಟ್ ಲುಕ್ ಹೊಸ ವರ್ಷದಂದು ಬಿಡುಗಡೆಯಾಗಿತ್ತು. ಸಮುದ್ರದಲ್ಲಿ ಶಿಪ್ ನಲ್ಲಿ ಏಕಾಂಗಿ ವಾರಿಯರ್ ನಂತೆ ನಿಂತಿರುವ ಜ್ಯೂ.ಎನ್ ಟಿಆರ್ ಫೋಟೋ ಪ್ರಕಟಿಸಲಾಗಿತ್ತು. ಆ ಸಂದರ್ಭದಲ್ಲಿ ಚಿತ್ರತಂಡ ಟೀಸರ್ ರಿಲೀಸ್ ದಿನಾಂಕವನ್ನೂ ಘೋಷಿಸಿತ್ತು.
ಇಂದು ಸಂಜೆ 4.05 ಕ್ಕೆ ದೇವರ ಸಿನಿಮಾ ಟೀಸರ್ ಬಿಡುಗಡೆಯಾಗುತ್ತಿದೆ. ಮೂಲಗಳ ಪ್ರಕಾರ ದೇವರ ಟೀಸರ್ ನಲ್ಲಿ ಹಿಂದೆಂದೂ ಕಾಣದಂತಹ ತಾಂತ್ರಿಕ ಶ್ರೀಮಂತಿಕೆ ಕಂಡುಬರಲಿದೆ. ಸುಮಾರು ಒಂದು ನಿಮಿಷ 23 ಸೆಕೆಂಡ್ ಅವಧಿಯ ಟೀಸರ್ ಇದಾಗಿರಲಿದೆ ಎನ್ನಲಾಗುತ್ತಿದೆ.
ದೇವರ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಜ್ಯೂ.ಎನ್ ಟಿಆರ್ ಗೆ ನಾಯಕಿಯಾಗಿ ಜಾಹ್ನವಿ ಕಪೂರ್ ಮತ್ತು ಇತರೆ ಪಾತ್ರವರ್ಗದಲ್ಲಿ ಸೈಫ್ ಅಲಿ ಖಾನ್, ಪ್ರಕಾಶ್ ರಾಜ್ ಮುಂತಾದ ಘಟಾನುಘಟಿಗಳು ನಟಿಸುತ್ತಿದ್ದಾರೆ.