Select Your Language

Notifications

webdunia
webdunia
webdunia
webdunia

ಜಾಗ್ವಾರ್ ಪ್ರಚಾರಕ್ಕೆ ಅಮೆರಿಕಾಕ್ಕೆ ತೆರಳಿದ ಕುಮಾರಸ್ವಾಮಿ

ಜಾಗ್ವಾರ್ ಪ್ರಚಾರಕ್ಕೆ ಅಮೆರಿಕಾಕ್ಕೆ ತೆರಳಿದ ಕುಮಾರಸ್ವಾಮಿ
Bangalore , ಮಂಗಳವಾರ, 25 ಅಕ್ಟೋಬರ್ 2016 (12:33 IST)
ಬೆಂಗಳೂರು: ತಮ್ಮ ಪುತ್ರ ನಿಖಿಲ್ ಗೌಡ ಅಭಿನಯದ ಮೊದಲ ಚಲನಚಿತ್ರ “ಜಾಗ್ವಾರ್” ಚಿತ್ರದ ಪ್ರಚಾರಕ್ಕಾಗಿ ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಸಂಸಾರ ಸಮೇತ ಅಮೆರಿಕಾಕ್ಕೆ ತೆರಳಿದ್ದಾರೆ.

ಪತ್ನಿ ಹಾಗೂ ಪತ್ರನ ಜತೆಗೆ ಕುಮಾರಸ್ವಾಮಿ ವಿದೇಶದ ವಿಮಾನ ಏರಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಜಾಗ್ವಾರ್ ಚಿತ್ರವನ್ನು ಅಮೆರಿಕಾದಲ್ಲಿ ಬಿಡುಗಡೆ ಮಾಡುವ ಯೋಜನೆ ಚಿತ್ರ ತಂಡದ್ದು.

ಇದು ಒಟ್ಟು 45 ಕೇಂದ್ರಗಳಲ್ಲಿ ತೆರೆಕಾಣಲಿದೆ ಎಂದು ಕುಮಾರ ಸ್ವಾಮಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರವನ್ನು ಯುರೋಪ್, ಮಧ್ಯ ಪೂರ್ವರಾಷ್ಟ್ರಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕಿದೆಯಂತೆ.

ಅಮೆರಿಕಾದಲ್ಲಿ ಚಿತ್ರ ಬಿಡುಗಡೆ ಮಾಡುವುದರ ಜತೆಗೆ ಅಭಿಮಾನಿಗಳ ಜತೆಗೆ ನಾಯಕ ನಿಖಿಲ್ ಗೌಡ ಸಂವಾದ ನಡೆಸಲಿದ್ದಾರಂತೆ. ಜಾಗ್ವಾರ್ ಚಿತ್ರ ರಾಜ್ಯದಲ್ಲಿ ಈಗಾಗಲೇ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಾರುಖ್ ಖಾನ್ ದಂಪತಿ ಮದುವೆಗೆ 25 ವರ್ಷ