Select Your Language

Notifications

webdunia
webdunia
webdunia
webdunia

ಶಾರುಖ್ ಖಾನ್ ದಂಪತಿ ಮದುವೆಗೆ 25 ವರ್ಷ

ಶಾರುಖ್ ಖಾನ್ ದಂಪತಿ ಮದುವೆಗೆ 25 ವರ್ಷ
Mumbai , ಮಂಗಳವಾರ, 25 ಅಕ್ಟೋಬರ್ 2016 (12:00 IST)
ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಮದುವೆಯಾಗಿ ಇಂದಿಗೆ 25 ವರ್ಷ. ಹೀಗಾಗಿ ಖಾನ್ ಸಾಹೇಬರು ಮಡದಿಯೊಂದಿಗೆ ಬ್ಯುಸಿ ಶೂಟಿಂಗ್ ಶೆಡ್ಯೂಲ್ ನ ನಡುವೆಯೂ ಆನಿವರ್ಸರಿ ಆಚರಿಸಿಕೊಳ್ಳುತ್ತಿದ್ದಾರೆ.

ಸದ್ಯಕ್ಕೆ ಡಿಯರ್ ಜಿಂದಗಿ ಚಿತ್ರದ ಶೂಟಿಂಗ್ ಗಾಗಿ ಲಿಸ್ಬನ್ ನಲ್ಲಿರುವ ಶಾರುಖ್  ಆದಷ್ಟು ಬೇಗ ಚಿತ್ರೀಕರಣ ಮುಗಿಸಿ ಮಡದಿ ಮತ್ತು ಮಕ್ಕಳೊಂದಿಗೆ ಕೊಂಚ ಖಾಸಗಿ ಸಮಯ ಕಳೆಯಲಿದ್ದಾರಂತೆ.

ಶಾರುಖ್ ಮತ್ತು ಗೌರಿ 1991 ರ ಅಕ್ಟೋಬರ್ 25 ರಂದು ಪ್ರೀತಿಸಿ ಮದುವೆಯಾಗಿದ್ದರು.  ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರತೀ ವರ್ಷದಂತೆ ಪಾರ್ಟಿ ಇಟ್ಟುಕೊಳ್ಳಲಿರುವ ಶಾರುಖ್ ಈ ಬಾರಿ ತಮ್ಮ ವೈವಾಹಿಕ ಜೀವನದ ಬೆಳ್ಳಿ ಹಬ್ಬದ ಸಂಭ್ರಮವನ್ನೂ ಆಚರಿಸಿಕೊಳ್ಳಬಹುದು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್: ಈ ವಾರ ಏಳು ಸ್ಪರ್ಧಿಗಳು ನಾಮಿನೇಟ್ !