Select Your Language

Notifications

webdunia
webdunia
webdunia
webdunia

ಬಾಹುಬಲಿ 2 ಬಗ್ಗೆ ನವರಸನಾಯಕ ಜಗ್ಗೇಶ್ ಏನಂತಾರೆ?

ಬಾಹುಬಲಿ 2 ಬಗ್ಗೆ ನವರಸನಾಯಕ ಜಗ್ಗೇಶ್ ಏನಂತಾರೆ?
Bnagalore , ಶನಿವಾರ, 29 ಏಪ್ರಿಲ್ 2017 (07:36 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಸದಾ ಕನ್ನಡಪರ ಮಾತನಾಡುವವರು. ಡಬ್ಬಿಂಗ್ ಚಿತ್ರ ಕನ್ನಡಕ್ಕೆ ಬರುತ್ತದೆಂದಾಗ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುತ್ತೇವೆ ಎಂದವರು. ಅಂತಹವರೀಗ ಬಾಹುಲಿ ಬಗ್ಗೆ ಏನಂತಾರೆ ಕೇಳೋಣ.

 
ಸದಾ ಕನ್ನಡಕ್ಕೆ ಜೈ ಎನ್ನುವ ಜಗ್ಗೇಶ್ ಇದೀಗ ಬಾಹುಬಲಿ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಬಾಹುಬಲಿಗೆ ಜೈ ಎನ್ನುತ್ತಿದ್ದರೆ ಜಗ್ಗೇಶ್ ಕನ್ನಡ ಚಿತ್ರ ರಾಗ ಕ್ಕೆ ಜೈ ಎಂದಿದ್ದಾರೆ.

ಬಾಹುಬಲಿ ಭಾಗ 1 ಬಿಡುಗಡೆಯಾದ ಸಮಯದಲ್ಲೇ ಕನ್ನಡದ ರಂಗಿ ತರಂಗ ಬಿಡುಗಡೆಯಾಗಿತ್ತು. ನಮ್ಮ ಜನ ಬಾಹುಬಲಿ ಬಿಟ್ಟು ಅಪ್ಪಟ ಕನ್ನಡದ ರಂಗಿ ತರಂಗವನ್ನು ಗೆಲ್ಲಿಸಿದ್ದರು. ಈಗಲೂ ಹಾಗೇ ಮಾಡಿ.

ಬಾಹುಬಲಿ ಹುಚ್ಚು ಬಿಟ್ಟು, ಕನ್ನಡದ ರಾಗ ಸಿನಿಮಾವನ್ನು ಗೆಲ್ಲಿಸಿ ಎಂದು ಜಗ್ಗೇಶ್ ಪ್ರೇಕ್ಷಕರಿಗೆ ಮನವಿ ಮಾಡಿದ್ದಾರೆ. ಆದರೆ ಜಗ್ಗೇಶ್ ಹೇಳಿದಷ್ಟು ಸುಲಭವಲ್ಲ. ಯಾಕೆಂದರೆ ಕರ್ನಾಟಕದಲ್ಲೂ ಬಾಹುಬಲಿ 2 ಸಿನಿಮಾಗೆ ಮೊದಲ ದಿನ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ 2 ಮೊದಲ ದಿನ ಮಾಡಿದ ಲಾಭವೆಷ್ಟು ಗೊತ್ತಾ?