35 ವರ್ಷದ ಹಿಂದಿನ ಕಷ್ಟ ನೆನೆಸಿಕೊಂಡ ಜಗ್ಗೇಶ್

Webdunia
ಶುಕ್ರವಾರ, 22 ಮಾರ್ಚ್ 2019 (09:53 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ತಮ್ಮ ಬದುಕಿನಲ್ಲಿ ಏನೇ ಶುಭ ಗಳಿಗೆಯಿದ್ದರೂ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಾರೆ. ಇಂದು ಅವರ ವಿವಾಹ ವಾರ್ಷಿಕೋತ್ಸವವಾಗಿದ್ದು, ಆ ನೆನಪುಗಳನ್ನು ಮೆಲುಕು ಹಾಕಿದ್ದಾರೆ.


ಮನೆಯವರ ವಿರೋಧ ಕಟ್ಟಿಕೊಂಡು ಜಗ್ಗೇಶ್‍, ಪರಿಮಳಾರನ್ನು ಪ್ರೀತಿಸಿ ಮದುವೆಯಾಗಿದ್ದರು. ಆಗ 2000 ರೂ. ಖರ್ಚಿನಲ್ಲಿ 35 ವರ್ಷದ ಹಿಂದೆ ಮದುವೆಯಾದ ನೆನಪುಗಳು ಇನ್ನೂ ಅಮರ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

‘1984 ಮಾರ್ಚ್ 22 ನಾನು ಪರಿಮಳ 2000 ರೂ. ಖರ್ಚಿನಲ್ಲಿ ಮದುವೆಯಾಗಿ ಇಂದಿಗೆ 35 ವರ್ಷ. ಅಂದು ಕಲ್ಲಿನ ಮೇಲೆ ಕೆತ್ತಿದ ಜಾಗದಲ್ಲಿ ನಾವಿಬ್ಬರೂ ಕೂತಾಗ ನಡೆದುಬಂದ ಕಷ್ಟಸುಖದ ಸ್ವಾಭಿಮಾನದ ದಾರಿ ನೆನೆದು ಕಣ್ಣು ಒದ್ದೆಯಾಯಿತು. ಅಮರ ಹಳೆ ನೆನಪು’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲ, ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಮತ್ತೆ ರಾಯರ ಸನ್ನಿಧಿಗೆ ಕುಟುಂಬ ಸಮೇತ ತೆರಳಿದ್ದಾರೆ. ಅಲ್ಲದೆ, ಅದೇ ಜಾಗದಲ್ಲಿ ಪತ್ನಿ ಮಕ್ಕಳ ಸಮೇತ ಫೋಟೋ ತೆಗೆದು ಖುಷಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಡುಗಡೆಯಾದ ಒಂದೇ ತಿಂಗಳಲ್ಲಿ ಒಟಿಟಿಗೆ ಎಂಟ್ರಿಯಾದ ರಶ್ಮಿಕಾ ಮಂದಣ್ಣ ನಟನೆಯ ದಿ ಗರ್ಲ್‌ಫ್ರೆಂಡ್

ಪಂಜುರ್ಲಿ ದೈವಕ್ಕೆ ಹರಕೆ ತೀರಿಸಿದ ರಿಷಬ್ ಶೆಟ್ಟಿ: ದೈವ ಹೇಳಿದ್ದು ಏನು

ನಟ ಶಾರುಖ್‌ಖಾನ್ ಪುತ್ರನ ಇದೆಂಥಾ ದುರ್ವರ್ತನೆ, ವಿಡಿಯೋ ವೈರಲ್

ಸಮಂತಾ ಮದುವೆ ಬೆನ್ನಲ್ಲೇ ನಾಗಚೈತನ್ಯ ಜತೆಗಿನ ವಿಶೇಷ ಕ್ಷಣದ ವಿಡಿಯೋ ಹಂಚಿಕೊಂಡ ಶೋಭಿತಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ
Show comments