Select Your Language

Notifications

webdunia
webdunia
webdunia
webdunia

ಆಲಿಯಾ ಭಟ್ ಅವರಿಗೆ ತಾಯಿಯಾಗಿ ಮಾಧುರಿ ದೀಕ್ಷಿತ್?

ಆಲಿಯಾ ಭಟ್ ಅವರಿಗೆ ತಾಯಿಯಾಗಿ ಮಾಧುರಿ ದೀಕ್ಷಿತ್?
, ಬುಧವಾರ, 22 ಜೂನ್ 2016 (08:54 IST)
ಮಾಧುರಿ ದೀಕ್ಷಿತ್- ಒಂದು ಕಾಲದಲ್ಲಿ ಬಾಲಿವುಡ್ ಅಂಗಳದಲ್ಲಿ ರಾಣಿಯಾಗಿ ಮರೆದವರು.ಅವರ ನೃತ್ಯಕ್ಕೆ ಮನಸೊಲದ ಅಭಿಮಾನಿಗಳೇ ಇಲ್ಲ. ಇಂದಿಗೂ ಮಾಧುರಿ ಅವರ ಹಳೇ ಹಾಡುಗಳನ್ನು ನೋಡೋದಕ್ಕೆ ಮುಗಿ ಬೀಳುವ ಅದೆಷ್ಟೋ ಅಭಿಮಾನಿಗಳಿದ್ದಾರೆ. ಅದರೆ ವಿವಾಹದ ಬಳಿಕ ಮಾಧುರಿ ಸಿನಿಮಾ ರಂಗದಿಂದಲೇ ದೂರ ಉಳಿದ್ರು.
 
ಗುಲಾಬ್ ಗ್ಯಾಂಗ್ ಸಿನಿಮಾದ ಮೂಲಕ ಮಾಧುರಿ ಮತ್ತೆ ಬಾಲಿವುಡ್ ಗೆ ಕಮ್ ಬ್ಯಾಕ್ ಮಾಡಿದ್ರು.ಆಗ ಅಭಿಮಾನಿಗಳು ಮಾಧುರಿ ಇನ್ನು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ ಅಂತೇ ಅಂದುಕೊಂಡಿದ್ದರು.ಆದ್ರೆ ಮಾಧುರಿ ಕಿರುತೆರೆಯಲ್ಲಿ ಕಾಣಿಸಿಕೊಂಡಷ್ಟು ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಇದೀಗ ಅವರು ಮತ್ತೆ ಅಭಿನಯಿಸುತ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.ಅಂದ್ಹಾಗೆ ಮಾಧುರಿ ಮಾಡುತ್ತಿರುವ ಪಾತ್ರ ಯಾವುದು ಅಂತಾ ಕೇಳಿದ್ರೆ ನೀವು ಅರೆ ಕ್ಷಣ ದಂಗುತ್ತೀರಾ.

 
ಅಂದ್ಹಾಗೆ ಟು ಸ್ಟೇಟ್ಸ್ ಸಿನಿಮಾದ ನಿರ್ದೇಶಕ ಅಭಿಷೇಕ್ ವರ್ಮನ್ ಅವರು ಮಾಡುತ್ತಿರುವ ಶಿದ್ದತ್ ಸಿನಿಮಾದಲ್ಲಿ ಆಲಿಯಾ ಭಟ್ ಅವರಿಗೆ ಮಾಧುರಿ ಅವರು ತಾಯಿಯಾಗಿ ಅಭಿನಯಿಸಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.ತ್ರಿಕೋನ ಪ್ರೇಮಕಥೆ ಆಧಾರಿತ ಸಿನಿಮಾ ಇದಾಗಿದ್ದು ಈ ಸಿನಿಮಾದಲ್ಲಿ ಅರ್ಜುನ್ ಕಪೂರ್ ವರುಣ್ ದವನ್ ಹಾಗೇ ಆಲಿಯಾ ಅವರು ಜೊತೆಯಾಗಿ ಅಭಿನಯಿಸುತ್ತಿದ್ದಾರೆ. ಆದ್ರೆ ಮಾಧುರಿ ಅಭಿನಯಿಸುತ್ತಿರೋದು ಇದುವರೆಗೂ ಕನ್ಫರ್ಮ್ ಆಗಿಲ್ಲ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಲು-ಕತ್ರೀನಾರನ್ನು ಮತ್ತೆ ತೆರೆ ಕಾಣಲು ಬಯಸುತ್ತಿರುವ ಅಭಿಮಾನಿ