ಅದಿತಿ ಮುಂದೆ ಪಾಸೋ, ಫೇಲೋ ಎಂಬ ಭಯವಿತ್ತು: ಸಿದ್ಧಾರ್ಥ್

Sampriya
ಮಂಗಳವಾರ, 9 ಏಪ್ರಿಲ್ 2024 (19:12 IST)
photo Courtesy Instagram
ಮುಂಬೈ: ಕುಟುಂಬದೊಂದಿಗೆ ಖಾಸಗಿಯಾಗಿ ಸಮಾರಂಭ ಮಾಡುವುದಕ್ಕೂ,  ರಹಸ್ಯವಾಗಿ ಏನನ್ನಾದರೂ ಮಾಡುವುದಕ್ಕೂ ತುಂಬಾನೇ ವ್ಯತ್ಯಾಸವಿದೆ ಎಂದು ನಟ ಸಿದ್ಧಾರ್ಥ್ ಅವರು ನಟಿ ಅದಿತಿ ರಾವ್ ಜತೆಗಿನ ನಿಶ್ಚಿತಾರ್ಥದ ಬಗ್ಗೆ ಮಾತನಾಡಿದ್ದಾರೆ, ‌

ನಟ ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿಶ್ಚಿತಾರ್ಥದ ಸಲುವಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಇಬ್ಬರು ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ಹೇಳಲಾಗಿತ್ತು. ನಂತರ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ನಟಿ ಅದಿತಿ ಅವರು ಸ್ಪಷ್ಟನೆ ನೀಡಿದ್ದರು.

ಈ ಸಂಬಂಧ ಮಾಧ್ಯಮದ ಮುಂದೆ ಮುಕ್ತವಾಗಿ ಮಾತನಾಡಿದ ನಟ ಸಿದ್ಧಾರ್ಥ್ ಅವರು, ಕುಟುಂಬದವರೊಂದಿಗೆ ಕಾರ್ಯಕ್ರಮ ನಡೆಯುವುದಕ್ಕೂ, ರಹಸ್ಯವಾಗಿ ನಡೆಯುವ ಕಾರ್ಯಕ್ರಮಕ್ಕೂ ತುಂಬಾನೇ ವ್ಯತ್ಯಾಸವಿದೆ. ನಮ್ಮದು ಕುಟುಂಬದವರ ಮುಂದೆ ಖಾಸಗಿಯಾಗಿ ನಡೆದ ನಿಶ್ಚಿತಾರ್ಥ. ಸಮಾರಂಭಕ್ಕೆ ಆಹ್ವಾನಿಸದಿದ್ದವರು ಇದನ್ನು ರಹಸ್ಯವೆಂದು ಕರೆದಿದ್ದಾರೆಂದು ಹೇಳಿದರು.

ಇನ್ನೂ ಅದಿತಿ ರಾವ್ ಹೈದರಿ ಅವರು ನಿಮ್ಮ ಪ್ರೀತಿಯನ್ನು ಒಪ್ಪಲು ಎಷ್ಟು ಸಮಯ ತೆಗೆದುಕೊಂಡರು  ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,  ಎಷ್ಟು ಸಮಯ ತೆಗೆದುಕೊಂಡಿತು ಎಂಬುದಕ್ಕಿಂತ ಅಂತಿಮವಾಗಿ ಫಲಿತಾಂಶ ಹೌದು ಅಥವಾ ಇಲ್ಲ ಎಂಬುದು ಮುಖ್ಯವಾಗಿತ್ತು. ನಾನು ಪ್ರೀತಿಯಲ್ಲಿ ಎಷ್ಟು ಮಾರ್ಕ್‌ ಪಡೆದೆ ಅನ್ನುವುದಕ್ಕಿಂತ ಪಾಸ್ ಅಥವಾ ಫೇಲ್ ಎಂದು ಟೆನ್ಷನ್‌ನಲ್ಲಿದ್ದೆ. ಕೊನೆಗೂ ಪಾಸ್ ಪಟ್ಟಿಯಲ್ಲಿ ನನ್ನ ಹೆಸರಿತ್ತು ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಗ್‌ಬಾಸ್‌ ಮನೆಯಲ್ಲಿ ಪ್ರೇಮಲೋಕ ಸೃಷ್ಟಿಸಿದ ಕ್ರೇಜಿಸ್ಟಾರ್‌ ರವಿಚಂದ್ರನ್‌, ಫಸ್ಟ್‌ ಲವರ್‌ ಬಗ್ಗೆ ಬಿಚ್ಚು ಮಾತು

ಕಾಂತಾರದ ಅಭಿನಯಕ್ಕೆ ಪ್ರಶಂಸೆ ಬೆನ್ನಲ್ಲೇ ಬಾಲಿವುಡ್‌ಗೆ ಜಿಗಿದ ರುಕ್ಮಿಣಿ ವಸಂತ್

ಕೆಜಿಎಫ್‌ ಚಾಪ್ಟರ್‌ 2 ಸಹ ನಿರ್ದೇಶಕ ಬಾಳಲ್ಲಿ ಇದೆಂಥಾ ದುರಂತ

ಒಳ್ಳೆ ಪಾತ್ರ ಸಾಯಿಸೋದು ಎಷ್ಟು ಸರಿ: ಲಕ್ಷ್ಮೀ ನಿವಾಸ ಸೀರಿಯಲ್ ವಿರುದ್ಧ ಸಿಡಿದೆದ್ದ ಹಿರಿಯ ನಟಿ

ರಿಷಬ್ ಶೆಟ್ಟಿ ಜೊತೆ ಸರಿಯಿಲ್ವಾ, ಏನಾಗಿದೆ: ರಾಜ್ ಬಿ ಶೆಟ್ಟಿ ಕೊನೆಗೂ ಕೊಟ್ರು ಮಾಹಿತಿ

ಮುಂದಿನ ಸುದ್ದಿ
Show comments