Webdunia - Bharat's app for daily news and videos

Install App

ಮಲಯಾಳಂ ಸಿನಿಮಾ ಮಂಜುಮೇಲ್ ಬಾಯ್ಸ್ ವಿರುದ್ಧ ಇಳಯರಾಜ ಸಮರ

Krishnaveni K
ಗುರುವಾರ, 23 ಮೇ 2024 (16:47 IST)
ಕೊಚ್ಚಿ: ಸೂಪರ್ ಹಿಟ್ ಆಗಿದ್ದ ಮಲಯಾಳಂನ ಮಂಜುಮೇಲ್ ಬಾಯ್ಸ್ ಸಿನಿಮಾ ತಂಡದ ವಿರುದ್ಧ ಸಂಗೀತ ನಿರ್ದೇಶಕ ಇಳಯರಾಜ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಮಂಜುಮೇಲ್ ಬಾಯ್ಸ್ ಇತ್ತೀಚೆಗೆ ಬಿಡುಗಡೆಯಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಮಲಯಾಳಂ ಸಿನಿಮಾದಲ್ಲಿ ದಾಖಲೆಯ 200 ಕೋಟಿ ಕಲೆಕ್ಷನ್ ಮಾಡಿದ್ದ ಸಿನಿಮಾ ತಂಡದ ವಿರುದ್ಧ ಇದೀಗ ಸಂಗೀತ ದಿಗ್ಗಜ ಇಳಯರಾಜ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಇದಕ್ಕೆ ಕಾರಣ ಚಿತ್ರದಲ್ಲಿ ಬಳಸಿಕೊಂಡಿರುವ ಒಂದು ಹಾಡು. ಚಿತ್ರದಲ್ಲಿ ಕಣ್ಮಣಿ ಎನ್ನುವ ಹಾಡು ಬಳಸಲಾಗಿದೆ. ಈ ಹಾಡಿನ ಮೂಲ ಗುಣ ಸಿನಿಮಾದ ಇಳಯರಾಜ ಸಂಗೀತ ನಿರ್ದೇಶನದ ಕಣ್ಮಣಿ ಹಾಡಿನದ್ದಾಗಿದೆ. ಈ ಹಾಡು 1991 ರಲ್ಲಿ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು. ಇದೀಗ ಅದೇ ಹಾಡನ್ನು ಮಂಜುಮೇಲ್ ಬಾಯ್ಸ್ ನಲ್ಲಿ ಬಳಸಲಾಗಿದೆ.

ಆದರೆ  ಇದಕ್ಕೆ ತಮ್ಮ ಅನುಮತಿ ಪಡೆದಿರಲಿಲ್ಲ ಎಂದು ಇಳಯರಾಜ ಸಿಟ್ಟಾಗಿದ್ದಾರೆ. ಇದೇ ಕಾರಣಕ್ಕೆ ಚಿತ್ರತಂಡದ ವಿರುದ್ಧ ನೋಟಿಸ್ ನೀಡಿದ್ದಾರೆ. ಈ ಹಾಡಿನ ಹಕ್ಕು ಸಂಪೂರ್ಣವಾಗಿ ನನ್ನದಾಗಿದೆ. ಇದನ್ನು ಸಿನಿಮಾದಲ್ಲಿ ಅಕ್ರಮವಾಗಿ ಬಳಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments