Select Your Language

Notifications

webdunia
webdunia
webdunia
webdunia

ನನಗೆ ಡಾನ್ ಪಾತ್ರಧಾರಿಯಾಗಿ ಕಾಣಿಸಿಕೊಳ್ಳಲು ಹೆಚ್ಚು ಖುಷಿ: ರಜನಿಕಾಂತ್

webdunia
  • facebook
  • twitter
  • whatsapp
share
ಗುರುವಾರ, 18 ಜೂನ್ 2015 (10:47 IST)
ಸೂಪರ್ ಸ್ಟಾರ್ ರಜನಿಕಾಂತ್ ಅವರು ಒಂದೇ ಸಮನೆ ಚಿತ್ರಗಳಲ್ಲಿ ನಟಿಸಬೇಕು, ಪ್ರೇಕ್ಷಕರು ಅದಕ್ಕೆ ಅತ್ಯುತ್ತಮ ಫಲಿತಾಂಶ ನೀಡಬೇಕು ಎನ್ನುವ ಆಸೆಯಲ್ಲಿ ಮಾತ್ರವಲ್ಲ ಪೂರಕವಾದ ಪ್ರಯತ್ನಗಳನ್ನು ಸಹಿತ ಮಾಡುತ್ತಿದ್ದಾರೆ. ಅದಕ್ಕೆಂದು ವಿಶೇಷವಾದ ಚಿತ್ರಗಳ ಆಯ್ಕೆಯಲ್ಲಿ ಇದ್ದಾರೆ ಈ ಸೂಪರ್ ಸ್ಟಾರ್. ಇತ್ತೀಚೆಗೆ ರಜನಿಕಾಂತ್ ಅವರು ತಮಗೆ ಇಷ್ಟವಾದ ವಿಷಯದಲ್ಲಿ ತಾವು ನಟಿಸುತ್ತಿರುವುದಾಗಿ ಹೇಳಿದ್ದಾರೆ. ಲಿಂಗಾ ಚಿತ್ರದ ಬಳಿಕ ಸ್ವಲ್ಪ ಗ್ಯಾಪ್ ತೆಗೆದುಕೊಂಡು ಅವರು ಈಗ ಹೊಸ ಚಿತ್ರದ ಕಡೆಗೆ ತಮ್ಮ ಚಿತ್ತ ನೆಟ್ಟಿದ್ದಾರೆ. 
ಈಗ ಅವರು ನಟಿಸುತ್ತಿರುವ ಹೊಸ ಚಿತ್ರದ ಬಗ್ಗೆ ಕಾಲಿವ್ದ್ ನಲ್ಲಿ ಚರ್ಚೆಯೋ ಚರ್ಚೆ. ಇದಕ್ಕೆ ಕಾರಣ ಅವರು ಡಾನ್ ಪಾತ್ರಧಾರಿಯಾಗುತ್ತಿದ್ದಾರೆ. 90ರ ದಶಕದಲ್ಲಿ ನಡೆದ ಕಥೆಯನ್ನು ಈ ಚಿತ್ರ ಹೊಂದಿದೆ ಎನ್ನುವ ಸಂಗತಿ ಕೇಳಿ ಬಂದಿದೆ. ಆಗ ಮಾಫಿಯ ಡಾನ್ ಪಾತ್ರಧಾರಿಯಾಗಿದ್ದ ಭಾಷ ಚಿತ್ರ ಭಾರಿ ಸಂಚಲನ ಹಾಗೂ ಯಶಸ್ಸು  ಪಡೆದಿತ್ತು. ಆದರೆ ಆ ಬಳಿಕ ಆ ರೀತಿಯ ಪಾತ್ರಗಳಲ್ಲಿ ನಟಿಸಲು ರಜನಿ ಆಸಕ್ತಿ ತೋರಿಸಿರಲಿಲ್ಲ. 
 
ಆದರೆ ಇತ್ತೀಚೆಗೆ ಭಾಗವಹಿಸಿದ ಸಂದರ್ಶನ ಒಂದರಲ್ಲಿ ತನಗೆ  ಭಾಷ ಚಿತ್ರವೆಂದರೆ ಸಾಕಷ್ಟು ಇಷ್ಟ ಎನ್ನುವ ಮಾತನ್ನು ಹೇಳಿದ್ದಾರೆ. ಬಹಳ ದಿನಗಳ ಬಳಿಕ ಈ ರೀತಿಯ ಪಾತ್ರದಲ್ಲಿ ನಟಿಸಲು ತನಗೆ ಖುಷಿಯಾಗಿದೆ  ಎನ್ನುವ ಮಾತನ್ನು ಸಹಿತ ಹೇಳಿದ್ದಾರೆ. ಈ ಚಿತ್ರವನ್ನು ಮದ್ರಾಸ್, ಅಟ್ಟಕತ್ತಿ ನಿರ್ದೇಶನ ಮಾಡಿದ್ದ ರಂಜಿತ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈಗ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. 

Share this Story:
  • facebook
  • twitter
  • whatsapp

Follow Webdunia Hindi