Webdunia - Bharat's app for daily news and videos

Install App

ಅವಾರ್ಡ್‌ಗೆ ನಾನು ಅರ್ಹಳಾಗಿದ್ದೆ: ರಾಷ್ಟ್ರ ಪ್ರಶಸ್ತಿ ಗೆದ್ದ ಕನ್ನಡತಿ ನಿತ್ಯಾ ಮೆನನ್ ಪ್ರತಿಕ್ರಿಯಿಸಿದ್ದು ಹೀಗೆ

Sampriya
ಭಾನುವಾರ, 18 ಆಗಸ್ಟ್ 2024 (10:01 IST)
Photo Courtesy X
ಬೆಂಗಳೂರು: 2022ನೇ ಸಾಲಿನ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆಯಾದ ನಿತ್ಯಾ ಮೆನನ್‌ ಪ್ರತಿಕ್ರಿಯಿಸಿದ್ದು, ನನಗೆ ಅವಾರ್ಡ್ ಬರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಪ್ರಶಸ್ತಿ ಈ ವಿಚಾರ ಖುಷಿ ತಂದಿದೆ ಎಂದಿದ್ದಾರೆ.

2022ರಲ್ಲಿ ಬಿಡುಗಡೆಯಾದ ಚಲನಚಿತ್ರಗಳಿಗೆ 70 ನೇ ವಾರ್ಷಿಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಶುಕ್ರವಾರ ಘೋಷಿಸಲಾಯಿತು. ಫೀಚರ್ ಫಿಲ್ಮ್ಸ್ ವಿಭಾಗದಲ್ಲಿ, ನಿತ್ಯಾ ಮೆನೆನ್ ಮತ್ತು ಮಾನಸಿ ಪರೇಖ್ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು. ನಿತ್ಯಾ ಅವರಿಗೆ ತಮಿಳು ಚಿತ್ರ ತಿರುಚಿತ್ರಂಬಲಂ ಅಭಿನಯಕ್ಕಾಗಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ತಿರುಚಿತ್ರಂಬಲಂ ಚಿತ್ರದಿಂದ ನನಗೆ ಅವಾರ್ಡ್ ಸಿಕ್ಕಿದ್ದು ಹೆಮ್ಮೆ ತಂದಿದೆ. ಈ ಸಿನಿಮಾನ ಮಾಡುವಾಗ ಹಾಗೂ ನೋಡುವಾಗ ಖುಷಿ ಕೊಟ್ಟಿದೆ. ನಾನು ಪ್ರಶಸ್ತಿಗೆ ಅರ್ಹಳಾಗಿದ್ದೆ ಎಂದಿದ್ದಾರೆ ಬೆಂಗಳೂರು ಮೂಲದ ನಿತ್ಯಾ.

2022ರ ಆಗಸ್ಟ್‌ನಲ್ಲಿ ಹೊರಬಂದ ತಿರುಚಿತ್ರಂಬಲಂ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆಗಿ ಹೊರಹೊಮ್ಮಿತು. ನಟರಾದ ಮಾನಸಿ ಪರೇಖ್ ಮತ್ತು ಧನುಷ್ ಅವರಿಗೆ ಅಪಾರ ಪ್ರಶಂಸೆಯನ್ನು ಗಳಿಸಿತು. ಕೇವಲ 30 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಸಿನಿಮಾ 100 ಕೋಟಿ ರೂ. ಗಳಿಕೆ ಕಂಡಿತು. ಪ್ರಕಾಶ್ ರಾಜ್ ಹಾಗೂ ಧನುಷ್ ಅವರು ತಿರುಚಿತ್ರಂಬಲಂ ಸಿನಿಮಾದಲ್ಲಿ ಕಮಾಲ್ ಮಾಡಿದ್ದರು.

ನಿತ್ಯಾ ಮೆನನ್ ಅವರು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ ಇದೆ. ಕಾಂತಾರ ಚಿತ್ರದ ಅಭಿನಯಕ್ಕಾಗಿ ನಟ ರಿಷಭ್‌ ಶೆಟ್ಟಿ ಅತ್ಯುತ್ತಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕನ್ನಡಕ್ಕೆ ಒಟ್ಟು ಏಳು ವಿಭಾಗದ ಪ್ರಶಸ್ತಿಗಳು ಲಭಿಸಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments