Select Your Language

Notifications

webdunia
webdunia
webdunia
webdunia

ಅಯೋದ್ಯೆ ಶ್ರೀರಾಮ ಪ್ರತಿಷ್ಠಾಪನೆ ದಿನ ಜನಿಸಿದ ಮಗಳಿಗೆ ಅದೆಂಥಾ ಹೆಸರಿಟ್ಟರು ನಟಿ ಕಾವ್ಯಾ ಗೌಡ

Kavya Gowda Daughter

Sampriya

ಬೆಂಗಳೂರು , ಶನಿವಾರ, 17 ಆಗಸ್ಟ್ 2024 (19:23 IST)
Photo Courtesy X
ಅಯೋದ್ಯೆ ಶ್ರೀರಾಮ ಮಂದಿರ ಉದ್ಘಾಟನೆ ದಿನವೇ ಹುಟ್ಟಿದ ಮಗಳಿಗೆ ಕಿರುತೆರೆ ನಟಿ ಕಾವ್ಯಾ ಗೌಡ ಸಿಯಾ ಸೋಮಶೇಖರ್ ಎಂದು ನಾಮಕರಣ ಮಾಡಿದ್ದಾರೆ. ಸಿಯಾ ಎಂದರೆ ಸೀತೆ ಎಂದರ್ಥ.

ಅಯೋದ್ಯೆಯಲ್ಲಿ ಜನವರಿ 22ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು. ಇನ್ನೂ ಈ ವಿಶೇಷ ದಿನದಂದೆ ‘ರಾಧಾ ರಮಣ‘ ಸೀರಿಯಲ್ ನಟಿ ಕಾವ್ಯಾ ಗೌಡ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು.

6 ತಿಂಗಳ ಬಳಿಕ ಮಗುವಿನ ಮುಖ ರಿವೀಲ್ ಮಾಡಿರುವ ಕಾವ್ಯಾ ಗೌಡ ಅವರು ಮಗಳಿಗೆ ಸಿಯಾ ಎಂದು ನಾಮಕರಣ ಮಾಡಿದ್ದೇವೆ ಎಂದಿದ್ದಾರೆ.

ಸಾಮಾಜಿಕ ಜಾಲತಾಣದ ಇನ್‌ಸ್ಟಾಗ್ರಾಂನಲ್ಲಿ ಮಗಳ ಮುದ್ದಾದ ವಿಡಿಯೋ ಹಂಚಿಕೊಂಡಿರುವ ಕಾವ್ಯಾ ಅವರು ಹೊಸ ಜರ್ನಿ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಸಿಯಾ ಎಂದರೆ ಸೀತೆ ಎಂದರ್ಥ. ಸುಂದರವಾದ ಹೂವು, ಅರಬ್‌ ಮೂಲದ ಹೂವು, ಸಿಹಿ ಎಂದರ್ಥ ಇದೆ.

ಕಾವ್ಯ ಗೌಡ ಉದ್ಯಮಿ ಸೊಮಶೇಖರ್ ಎಂಬುವವರನ್ನು 2021ರ ಡಿಸೆಂಬರ್‌ 2ರಂದು ಮದುವೆಯಾದರು. ಈ ದಂಪತಿ ತಮ್ಮ ಮೊದಲ ಮಗು ಸಿಯಾಳನ್ನು ಜನವರಿ 22ರಂದು ಸ್ವಾಗತಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಚುಲರ್ ರಕ್ಷಿತ್ ಶೆಟ್ಟಿಗೆ 20 ಲಕ್ಷ ರೂ ಬರೆ