Select Your Language

Notifications

webdunia
webdunia
webdunia
webdunia

ಹುಚ್ಚ ವೆಂಕಟ್ ರಾಜಕೀಯಕ್ಕೆ ಬರ್ತಾರಂತೆ!

ಹುಚ್ಚ ವೆಂಕಟ್ ರಾಜಕೀಯಕ್ಕೆ ಬರ್ತಾರಂತೆ!
Bangalore , ಮಂಗಳವಾರ, 28 ಮಾರ್ಚ್ 2017 (08:50 IST)
ಬೆಂಗಳೂರು: ಬಿಗ್ ಬಾಸ್ ನಿಂದ ಜನಪ್ರಿಯರಾದ ನಿರ್ದೇಶಕ, ನಟ ಹುಚ್ಚ ವೆಂಕಟ್ ಈಗ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಅಷ್ಟಕ್ಕೂ ಹುಚ್ಚ ವೆಂಕಟ್ ಪಕ್ಷದ ಹೆಸರೇನು? ಯಾರಿರ್ತಾರೆ ಅದರಲ್ಲಿ ಎನ್ನುವುದಕ್ಕೆ ಇಲ್ಲಿದೆ ಉತ್ತರ.

 

ಹುಚ್ಚ ವೆಂಕಟ್ ಗೆ ತಮ್ಮದೇ ಅಭಿಮಾನಿಗಳ ಬಳಗವಿದೆ. ‘ಹುಚ್ಚ ವೆಂಕಟ್ ಸೇನೆ’ ಎಂಬ ಅಭಿಮಾನಿಗಳ ಸಂಘವಿದೆ. ಇದೇ ಅದೇ ಅಭಿಮಾನಿಗಳ ಸಂಘವನ್ನು ರಾಜಕೀಯ ಪಕ್ಷವಾಗಿ ಬದಲಾಯಿಸಲು ಹೊರಟಿದ್ದಾರೆ. ಅದಕ್ಕೆ ‘ಹುಚ್ಚ ವೆಂಕಟ್ ಪಾರ್ಟಿ’ ಎಂದೂ ಹೆಸರಿಡಲಿದ್ದಾರೆ.

 
ಮುಂದಿನ ಚುನಾವಣೆಗೆ ವೆಂಕಟ್ ಸಕ್ರಿಯ ರಾಜಕಾರಣಕ್ಕೆ ಬರಲಿದ್ದಾರಂತೆ.  ಆದರೆ ದೇವ್ರಾಣೆ, ತಾವು ಮಾತ್ರ ಚುನಾವಣೆಗೆ ಸ್ಪರ್ಧಿಸುವುದಿಲ್ಲವಂತೆ. ತಮ್ಮ ಹುಡುಗರನ್ನೇ ಆಯಾಯ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸುವ ಯೋಜನೆ ಹಮ್ಮಿಕೊಂಡಿದ್ದಾರೆ. ಚುನಾವಣೆ ಖರ್ಚನ್ನೂ ಆಯಾ ಕ್ಷೇತ್ರದ ಹುಡುಗರೇ ನಿಭಾಯಿಸಬೇಕು ಎನ್ನುವುದು ವೆಂಕಟ್ ಹುಕುಂ!

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ-2 ಚಿತ್ರದ ಆಡಿಯೋ ಲಾಂಚ್ ವೇಳೆ ಗಳಗಳನೆ ಅತ್ತ ರಾಜಮೌಳಿ