Webdunia - Bharat's app for daily news and videos

Install App

ಹೊಂಬಾಳೆ ಫಿಲಂಸ್ ನಿಂದ ಮತ್ತೊಂದು ಗುಡ್ ನ್ಯೂಸ್: ಬಘೀರನ ಬರಮಾಡಿಕೊಳ್ಳಲು ರೆಡಿಯಾಗಿ!

Webdunia
ಗುರುವಾರ, 14 ಡಿಸೆಂಬರ್ 2023 (09:14 IST)
Photo Courtesy: Twitter
ಬೆಂಗಳೂರು: ಇತ್ತೀಚೆಗೆ ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡುತ್ತಿರುವ ಹೊಂಬಾಳೆ ಫಿಲಂಸ್ ಈಗ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಬಗ್ಗೆ ಅಪ್ ಡೇಟ್ ಕೊಟ್ಟಿದೆ.

ಇತ್ತೀಚೆಗಷ್ಟೇ ಕಾಂತಾರ ಚಾಪ್ಟರ್ 1 ಮುಹೂರ್ತ ನಡೆಸಿದ ಹೊಂಬಾಳೆ ಫಿಲಂಸ್ ಇದೀಗ ಸಲಾರ್ ಪಾರ್ಟ್ 1 ಬಿಡುಗಡೆ ತರಾತುರಿಯಲ್ಲಿದೆ. ಅದರ ನಡುವೆ ಮತ್ತೊಂದು ಸಿನಿಮಾ ಬಗ್ಗೆ ಅಪ್ ಡೇಟ್ ಕೊಟ್ಟಿದೆ.

ರೋರಿಂಗ್ ಸ್ಟಾರ್ ಶ್ರೀಮುರಳಿ ನಾಯಕರಾಗಿರುವ ‘ಬಘೀರ’ ಸಿನಿಮಾವನ್ನು ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿದೆ. ಈ ಸಿನಿಮಾದ ಟೀಸರ್ ಡಿಸೆಂಬರ್ 17 ರಂದು ಬೆಳಿಗ್ಗೆ 9.45 ಕ್ಕೆ ಲಾಂಚ್ ಆಗಲಿದೆ. ಈ ದಿನ ಶ್ರೀಮುರಳಿ ಹುಟ್ಟುಹಬ್ಬವಿದ್ದು, ಹುಟ್ಟುಹಬ್ಬಕ್ಕೆ ಈ ಉಡುಗೊರೆ ಸಿಗುತ್ತಿದೆ.

ಬಘೀರ ಸಿನಿಮಾಗೆ ಪ್ರಶಾಂತ್ ನೀಲ್ ಕತೆ ಬರೆದಿದ್ದಾರೆ. ಡಾ. ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಕೂಡಾ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೆಸರೇ ಹೇಳುವಂತೆ ಇದು ಮತ್ತೊಂದು ಆಕ್ಷನ್ ಥ್ರಿಲ್ಲರ್ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments