Webdunia - Bharat's app for daily news and videos

Install App

ಥಿಯೇಟರ್‌ನಲ್ಲಿ ಯುಐ ಸಿನಿಮಾ ನೋಡಲು ಮಿಸ್ ಆದವರಿಗೆ ಇಲ್ಲಿದೆ ಗುಡ್‌ನ್ಯೂಸ್‌

Sampriya
ಗುರುವಾರ, 2 ಜನವರಿ 2025 (16:07 IST)
photo Courtesy Instagram
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿ, ನಿರ್ದೇಶನ ಮಾಡಿರುವ ಯುಐ ಸಿನಿಮಾ ಇದೀಗ ಎಲ್ಲ ಸಿನಿಮಾ ಮಂದಿರಗಳಲ್ಲೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ವೀಕ್ಷಕರಿಂದ ಉತ್ತಮ ಮೆಚ್ಚುಗೆಯೊಂದಿಗೆ ಯುಐ ಸಿನಿಮಾ ಎಲ್ಲರ ಮನಸ್ಸು ಗೆಲ್ಲುತ್ತಿದೆ.   ಸಿನಿಮಾ ನಿರೀಕ್ಷೆಗೆ ತಕ್ಕಂತೆ ಉತ್ತಮ ಕಲೆಕ್ಷನ್ ಅನ್ನೇ ಮಾಡಿದ್ದು, ಕೆಲವೇ ದಿನಗಳ ಅಂತರದಲ್ಲಿ ಬಂದ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾದಿಂದಾಗಿ ಹೊಡೆತ ತಿಂದಿದೆ.

ಇದೀಗ 'ಯುಐ' ಸಿನಿಮಾ ಒಟಿಟಿಗೆ ಬರುತ್ತಿದ್ದು, ಚಿತ್ರಮಂದಿರದಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ಸಿನಿಮಾ ವೀಕ್ಷಿಸಲು ಅವಕಾಶವಿದೆ.

ವರದಿಯಂತೆ 'ಯುಐ' ಸಿನಿಮಾ ಸನ್ ನೆಕ್ಟ್ಸ್ ಒಟಿಟಿಯಲ್ಲಿ ತೆರೆಗೆ ಬರಲಿದೆ. ಯುಐ' ಸಿನಿಮಾ ಸ್ಟ್ರೀಮ್ ಮಾಡುತ್ತಿರುವ ಬಗ್ಗೆ ಯಾವುದೇ ಸೋಷಿಯಲ್ ಮೀಡಿಯಾ ಪೋಸ್ಟ್​ಗಳನ್ನು ಹಂಚಿಕೊಂಡಿಲ್ಲವಾದರೂ 'ಯುಐ' ಸಿನಿಮಾ ಸನ್ ನೆಕ್ಟ್ಸ್ ನಲ್ಲಿ ಕೆಲವೇ ದಿನಗಳಲ್ಲಿ ಸ್ಟ್ರೀಂ ಆಗಲಿದೆ ಎಂಬ ಸುದ್ದಿಗಳು ಈಗಾಗಲೇ ಪ್ರಕಟವಾಗಿವೆ.

ಉಪೇಂದ್ರ ನಟನೆಯ 'ಮುಕುಂದ ಮುರಾರಿ' ಸಹ ಸನ್ ನೆಕ್ಟ್ಸ್​ನಲ್ಲಿ ವೀಕ್ಷಣೆಗೆ ಈಗಾಗಲೇ ಲಭ್ಯವಿದೆ. ಇದೀಗ 'ಯುಐ' ಸಿನಿಮಾ ಸಹ ಸನ್ ನೆಕ್ಸ್ಟ್​ನಲ್ಲಿ ಬಿಡುಗಡೆಗೆ ಸಜ್ಜಾಗಿದೆ.

ಸನ್ ನೆಕ್ಸ್ಟ್​, ತೆಲುಗು ಹಾಗೂ ತಮಿಳು ಪ್ರೇಕ್ಷಕರಿಗೆ ಮೆಚ್ಚಿನ ಒಟಿಟಿ ಆಗಿದ್ದು, ತಮಿಳು ಹಾಗೂ ತೆಲುಗಿನ ಹಲವು ಉತ್ತಮ ಸಿನಿಮಾಗಳು ಈ ಒಟಿಟಿಯಲ್ಲಿ ಬಿಡುಗಡೆ ಆಗಿವೆ. ಹಿಂದಿ ಮತ್ತು ಇಂಗ್ಲೀಷ್ ಸಿನಿಮಾಗಳು ಸಹ ಈ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿವೆ. ಇದೀಗ ಯುಐ ಸಿನಿಮಾ ಸನ್‌ ನೆಕ್ಟ್ಸ್‌ನಲ್ಲಿ ಬರಲಿದೆ ಎನ್ನಲಾಗಿದೆ. ಇದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇನ್ನೂ ಸಿಕ್ಕಿಲ್ಲ. ಹಬ್ಬುತ್ತಿರುವ ಸುದ್ದಿಯ ಪ್ರಕಾರ ಇದೇ 15ನೇ ತಾರೀಖಿನ ನಂತರ 'ಯುಐ' ಸಿನಿಮಾ ಸನ್ ನೆಕ್ಟ್ಸ್ ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ ಎನ್ನಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments