Webdunia - Bharat's app for daily news and videos

Install App

ಕನ್ನಡ ಚಿತ್ರ ಗೆಲ್ಲುತ್ತಿಲ್ಲ ಎಂದವರಿಗೆ ಮುಖಕ್ಕೆ ಹೊಡೆದಂತೆ ಮಾಡಿದ ಗೋಲ್ಡನ್ ಸ್ಟಾರ್ ಕೃಷ್ಣಂ ಪ್ರಿಯ ಸಖಿ

Krishnaveni K
ಶುಕ್ರವಾರ, 16 ಆಗಸ್ಟ್ 2024 (08:52 IST)
ಬೆಂಗಳೂರು: ಇತ್ತೀಚೆಗೆ ಕನ್ನಡ ಸಿನಿಮಾಗಳು ಗೆಲ್ಲುತ್ತಿಲ್ಲ. ನಿರ್ಮಾಪಕರು, ಚಿತ್ರಮಂದಿರದ ಮಾಲಿಕರು ದಿವಾಳಿಯಾಗಿದ್ದಾರೆ ಎಂದು ಕಲಾವಿದರ ಸಂಘದಲ್ಲಿ ಪೂಜೆ ಮಾಡಲಾಗಿತ್ತು. ಆದರೆ ಸಿನಿಮಾ ಗೆಲ್ಲುತ್ತಿಲ್ಲ ಎಂದವರಿಗೆ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ ಕೃಷ್ಣಂ ಪ್ರಿಯ ಸಖಿ ಸೆಡ್ಡು ಹೊಡೆದಿದೆ.

ಇದಕ್ಕೆ ಮೊದಲು ಕಳೆದ ವಾರ ಬಿಡುಗಡೆಯಾಗಿದ್ದ ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿದ್ದ ಭೀಮ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗೆದ್ದಿತ್ತು. ಆ ಮೂಲಕ ಕನ್ನಡ ಸಿನಿಮಾ ನೋಡಲು ಥಿಯೇಟರ್ ಗೆ ಬರುತ್ತಿಲ್ಲ ಎನ್ನುವವರ ಮುಂದೆ ಗೆದ್ದು ತೋರಿಸಿತ್ತು. ಇದೀಗ ಕೃಷ್ಣಂ ಪ್ರಿಯ ಸಖಿ ಸರದಿ.

ಗಣೇಶ್ ಸಿನಿಮಾಗಳೆಂದರೆ ಫ್ಯಾಮಿಲಿ ಓರಿಯೆಂಟೆಡ್ ಕತೆಯಿರುತ್ತದೆ. ಕೃಷ್ಣಂ ಪ್ರಿಯ ಸಖಿ ಕೂಡಾ ಪಕ್ಕಾ ಗಣೇಶ್ ಶೈಲಿಯ ಸಿನಿಮಾ. ಈ ಸಿನಿಮಾದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದ್ದವು. ಇದೀಗ ಸಿನಿಮಾ ಕೂಡಾ ನಿನ್ನೆ ಬಿಡುಗಡೆಯಾಗಿ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದಿದೆ.

ಒಳ್ಳೆಯ ಸಿನಿಮಾಗಳನ್ನೇ ಕೊಡದೇ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂದು ಅತ್ತು ಕರೆದು ಮಾಡಿ ಏನು ಪ್ರಯೋಜನ? ಈಗ ಎರಡು ಸ್ಟಾರ್ ಸಿನಿಮಾಗಳು ಚಿತ್ರಮಂದಿರಕ್ಕೆ ಬಂದ ಬೆನ್ನಲ್ಲೇ ಜನ ಕೂಡಾ ಥಿಯೇಟರ್ ಗೆ ಬಂದು ಸಿನಿಮಾ ನೋಡಿದ್ದಾರೆ. ಅದರಲ್ಲೂ ಈ ವಾರಂತ್ಯದಲ್ಲಿ ಎರಡು ಮೂರು ದಿನ ರಜೆಯಿದ್ದು ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ನಿರೀಕ್ಷೆಯಿದೆ. ಈ ಎರಡು ಸಿನಿಮಾಗಳ ಯಶಸ್ಸು ಈಗ ಕನ್ನಡ ನಿರ್ಮಾಪಕರ ಆತ್ಮವಿಶ್ವಾಸ ಹೆಚ್ಚಿಸಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಥೈಲ್ಯಾಂಡ್ ನಿಂದ ವಾಪಸ್ ಆದ ದರ್ಶನ್ ಗೆ ವಿವಿಐಪಿ ಭದ್ರತೆ: video

ಆ ಕ್ಷಣ ಶಾಶ್ವತವಾಗಿ ಅಚ್ಚೊತ್ತಿದೆ: ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ತಂದೆ ಬಗ್ಗೆ ಶ್ರುತಿ ಹಾಸನ್ ಹೆಮ್ಮೆ

ಪೂಜಾ, ಕಿಶನ್ ಮದುವೆ ಬೆನ್ನಲ್ಲೇ ಆದಿ, ಭಾಗ್ಯಗೇ ಮದುವೆ ಮಾಡುವಂತೆ ಡೈರೆಕ್ಟರ್‌ಗೆ ಫ್ಯಾನ್ಸ್ ಬೇಡಿಕೆ

ರಾಜಕೀಯ ಭವಿಷ್ಯದಲ್ಲಿ ಹೊಸ ಮೈಲಿಗಲ್ಲಿನ ಹೆಜ್ಜೆಯಿಟ್ಟ ನಟ ಕಮಲ್ ಹಾಸನ್‌‌‌

ಪಾದ ಪೂಜೆ ನೆರವೇರಿಸಿ, ನನ್ನ ಗಂಡ ಮಿಲಿಯನ್‌ಗೊಬ್ಬ ಎಂದ ಸೋನಲ್, ನಟಿಗೆ ಸಂಪ್ರದಾಯದ ಮೇಲಿನ ಗೌರವಕ್ಕೆ ಫ್ಯಾನ್ಸ್‌ ಫಿದಾ

ಮುಂದಿನ ಸುದ್ದಿ
Show comments