ಬೆಂಗಳೂರು: ಗೋಧಿ ಬಣ್ಣ ಸಾಧಾರಣ ಮೈ ಕಟ್ಟು ಸಿನಿಮಾ ತಂಡ ಮತ್ತೊಂದು ಹೊಸ ಸಿನಿಮಾ ತೆರೆಗೆ ತರಲು ಸಜ್ಜಾಗಿದೆ. ಹಂಬಲ್ ಪೊಲಿಟೀಷಿಯನ್ ನೋಗರಾಜ್ ಎಂದು ಚಿತ್ರದ ಹೆಸರು.
ಇದೇನು ಅಂತ ತಲೆಕೆರೆದುಕೊಳ್ಳಬೇಡಿ. ಹೆಸರೇ ಒಂಥರಾ ವಿಚಿತ್ರವಾಗಿದೆ. ಇದೊಂದು ಪಕ್ಕಾ ಕಾಮಿಡಿ ಚಿತ್ರ. ಗೋಧಿ ಬಣ್ಣದಂತಹ ಸೆಂಟಿಮೆಂಟಲ್ ಚಿತ್ರ ಮಾಡಿದ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನ್ ಈ ಬಾರಿ ಪ್ರೇಕ್ಷಕರಿಗೆ ನಗು ತರಿಸಲು ಹಣ ಹೂಡುತ್ತಿದ್ದಾರೆ. ಇದು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ತಯಾರಾಗಲಿರುವ ಪ್ರಾಜೆಕ್ಟ್ ಎಂದಿದ್ದಾರೆ.
ಸಾದ್ ಖಾನ್ ನಿರ್ದೇಶಕರು. ಇದೊಂದು ರಾಜಕೀಯ ವಿಡಂಬನಾತ್ಮಕ ಸಿನಿಮಾ ಎಂದು ನಿರ್ಮಾಪಕರು ಹೇಳುತ್ತಾರೆ. ಡ್ಯಾನಿಶ್ ಸೈತ್ ಮುಖ್ಯ ಪಾತ್ರದಲ್ಲಿದ್ದಾರೆ. ಅವರದ್ದು ರಾಜಕಾರಣಿ ನೋಗರಾಜ್ ಪಾತ್ರವಂತೆ.
ಈ ಚಿತ್ರ ಸೆಟ್ಟೇರುವುದು ಮುಂದಿನ ವರ್ಷ ಜನವರಿಯಲ್ಲಿ. ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದೆ. ಉಳಿದ ಪಾತ್ರವರ್ಗದವರ ಆಯ್ಕೆ ಕೆಲಸಗಳೂ ಬಾಕಿಯಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ