ನಟಿ, ರೂಪದರ್ಶಿ ಗೆಹನಾ ವಸಿಷ್ಠ್ ಮತ್ತೆ ಲೈಮ್‌ಲೈಟಿಗೆ ಬಂದಿದ್ದಾರೆ. ಆನ್‌ಲೈನ್ ಸ್ಪರ್ಧೆಯಲ್ಲಿ ಮಿಸ್ ಏಷ್ಯಾ ಬಿಕಿನಿ ಟೈಟಲನ್ನು ಗೆದ್ದಿದ್ದ ಬೆಡಗಿ ಇವರು. ಈಗ ತೆಲುಗಿನ ಒಂದಷ್ಟು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲೂ ಬಿಸಿಬಿಸಿ ಚಿತ್ರಗಳನ್ನು ಹರಿಯಬಿಡುವುದರಲ್ಲಿ ಗೆಹನಾ ಅವರದು ಒಂದು ಕೈ ಮೇಲೆ.
ಇತ್ತೀಚೆಗೆ ಅಂತಹದ್ದೇ ಒಂದು ಫೋಟೋ ಹಾಕಿ ಎಲ್ಲರ ಗಮನಸೆಳೆದಿದ್ದಾರೆ. ಮೊದಲೇ ಚೆಂದುಳ್ಳಿ ಚೆಲುವೆ. ಇನ್ನು ಬಿಕಿನಿ ತೊಟ್ಟರೆ ಇನ್ನೇನಾಗಬೇಡ. ಹೇಗಿದೆ ಈ ಫೋಟೋ ಅಂತಲೂ ಕೇಳಿದ್ದಾರೆ. ಪಿಂಕ್ ಬ್ರಾ ತೊಟ್ಟು ರಸಿಕರ ಮೈಮನ ಪುಳಕಗೊಳಿಸಿದ್ದಾರೆ ಗೆಹನಾ.
ಈ ಹಿಂದೆ ಇದೇ ಬೆಡಗಿ ರಾಷ್ಟ್ರಧ್ವಜವನ್ನು ತನ್ನ ಮೈಗೆ ಸುತ್ತಿಕೊಂಡು ಇಡೀ ದೇಶದ ಗಮನಸೆಳೆದಿದ್ದರು. ಭಾರತದ ಅಥ್ಲೇಟ್ ಗಳು ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದರೆ ತಾವು ಬೆತ್ತಲೆ ಓಡುವುದಾಗಿ ಇತ್ತೀಚೆಗೆ ಈಕೆ ಪ್ರಕಟಿಸಿ ವಿವಾದಕ್ಕೀಡಾಗಿದ್ದ ಬೆಡಗಿ ಈ ಗೆಹನಾ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.