Select Your Language

Notifications

webdunia
webdunia
webdunia
webdunia

ಗೌತಮಿಪುತ್ರ ಶಾತಕರ್ಣಿ ಯೂಟ್ಯೂಬಲ್ಲಿ ದಾಖಲೆ ವೀಕ್ಷಣೆ

ಗೌತಮಿಪುತ್ರ ಶಾತಕರ್ಣಿ ಯೂಟ್ಯೂಬಲ್ಲಿ ದಾಖಲೆ ವೀಕ್ಷಣೆ
Hyderabad , ಶನಿವಾರ, 17 ಡಿಸೆಂಬರ್ 2016 (11:51 IST)
ಟಾಲಿವುಡ್‍ನ ’ಸಿಂಹ’ ನಂದಮೂರಿ ಬಾಲಕೃಷ್ಣ ಅಭಿನಯಿಸುತ್ತಿರುವ ಅದ್ದೂರಿ ವೆಚ್ಚದ ಸಿನಿಮಾ ಗೌತಮಿಪುತ್ರ ಶಾತಕರ್ಣಿ. ಈ ಐತಿಹಾಸಿಕ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹ ಅಭಿನಯಿಸಿರುವುದು ಗೊತ್ತೇ ಇದೆ. ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಹೊಸ ದಾಖಲೆ ನಿರ್ಮಿಸಿದೆ.
 
ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಹತ್ತು ಲಕ್ಷಜನ ವೀಕ್ಷಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಕ್ರಿಶ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಪಾತ್ರವರ್ಗದಲ್ಲಿ ಶ್ರಿಯಾ, ಹೇಮಾಮಾಲಿನಿ ಸಹ ಇದ್ದಾರೆ. ಶುಕ್ರವಾರ ಸಂಜೆ 5.30ಕ್ಕೆ ಗೌತಮಿಪುತ್ರ ಟ್ರೇಲರ್ ಬಿಡುಗಡೆ ಆಯಿತು. 
 
ಕರೀಂನಗರ ಥಿಯೇಟರ್ ಒಂದರಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಾಲಕೃಷ್ಣ ಆಗಮಿಸಿದ್ದರು. 2017ರ ಸಂಕ್ರಾಂತಿಗೆ ಚಿತ್ರ ಬಿಡುಗಡೆಯಾಗುತ್ತಿದೆ. ಒಟ್ನಲ್ಲಿ ಭಾರಿ ನಿರೀಕ್ಷೆಗಳನ್ನ ಹುಟ್ಟುಹಾಕಿರುವ ಐತಿಹಾಸಿಕ ಚಿತ್ರ ಇದು.  
 
ಈ ಚಿತ್ರದಲ್ಲಿ ಶಿವಣ್ಣ ತಮ್ಮ ಜಾನಪದ ಹಾಡಿನ ಮೂಲಕ ಶಾತಕರ್ಣಿಯನ್ನು ಪರಿಚಯಿಸಲಿದ್ದಾರೆ. ಮೊದಲಿಂದಲೂ ಶಿವಣ್ಣ ಮತ್ತು ಬಾಲಕೃಷ್ಣ ನಡುವೆ ಉತ್ತಮ ಬಾಂಧವ್ಯ ಇದೆ. ಆ ಸಲುಗೆಯಿಂದಲೇ ಶಿವಣ್ಣನನ್ನು ಚಿತ್ರದಲ್ಲಿ ನಟಿಸುವಂತೆ ಕೇಳಿಕೊಂಡಿದ್ದರು. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಶಿವಣ್ಣ ಎಸ್ ಎಂದಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿಷ್ಣು ಫ್ಯಾನ್ಸ್ ಗರಂಃ ’ಕನಕ’ ವಿವಾದಕ್ಕೆ ತೆರೆ ಎಳೆದ ಚಂದ್ರು