Webdunia - Bharat's app for daily news and videos

Install App

Exclusive:ತಾಜ್ ಮಹಲ್ ಮುಂದೆ ‘ಗಟ್ಟಿಮೇಳ’ದ ರೌಡಿ ಬೇಬಿ ಅಮೂಲ್ಯಗೆ ಮದುವೆ ಪ್ರಪೋಸಲ್

Webdunia
ಶನಿವಾರ, 6 ಫೆಬ್ರವರಿ 2021 (14:31 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಕನ್ನಡ ಧಾರವಾಹಿಗಳು ಯಾವ ಸಿನಿಮಾಗೂ ಕಡಿಮೆಯಿಲ್ಲದಂತೇ ಚಿತ್ರೀಕರಣಗೊಳ್ಳುತ್ತಿದೆ. ವಿಶಿಷ್ಟ ಲೊಕೇಷನ್ ಗಳಲ್ಲಿ ಚಿತ್ರೀಕರಣ ಮಾಡುವ ಮೂಲಕ ವೀಕ್ಷಕರಿಗೆ ಥ್ರಿಲ್ ಕೊಡುತ್ತಿದೆ. ಇದೀಗ ಗಟ್ಟಿಮೇಳ ಧಾರವಾಹಿ ತಂಡ ಅದೇ ಪ್ರಯತ್ನ ಮಾಡಿದೆ.


ಕಿರುತೆರೆಯಲ್ಲಿ ಟಿಆರ್ ಪಿಯಲ್ಲಿ ಸದಾ ಮುಂದಿರುವ ಗಟ್ಟಿಮೇಳ ಧಾರವಾಹಿ ತಂಡ ಈಗ ವಿಶ್ವ ವಿಸ್ಮಯ, ಪ್ರೇಮಸೌಧ ತಾಜ್ ಮಹಲ್ ಎದುರುಗಡೆ ಚಿತ್ರೀಕರಣ ಮಾಡಿದೆ. ಪ್ರೇಮಸೌಧದ ಮುಂದೆ ನಾಯಕ ವೇದಾಂತ್ ವಸಿಷ್ಠ ನಾಯಕಿ ರೌಡಿ ಬೇಬಿ ಅಮೂಲ್ಯಗೆ ಮದುವೆ ಪ್ರಪೋಸಲ್ ಮಾಡುವ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಈ ದೃಶ್ಯದಲ್ಲಿ ಕೇವಲ ನಾಯಕ-ನಾಯಕಿ ಮಾತ್ರವಲ್ಲದೆ, ನಾಯಕಿಯ ತಂದೆ ಮಂಜುನಾಥ್, ಪರಿಮಳಾ, ನಾಯಕನ ಸಹೋದರ ವಿಕ್ಕಿ ಕೂಡಾ ಭಾಗಿಯಾಗಿದ್ದಾರೆ.


ಸದ್ಯಕ್ಕೆ ಟಿ ಆರ್ ಪಿಯಲ್ಲಿ ಎರಡನೇ ಸ್ಥಾನದಲ್ಲಿರುವ ಗಟ್ಟಿಮೇಳ ಧಾರವಾಹಿ ಮತ್ತೆ ನಂ.1 ಸ್ಥಾನಕ್ಕೇರಲು ಈ ಸೀಕ್ವೆನ್ಸ್ ಸಹಾಯವಾಗಬಹುದು ಎಂಬ ನಿರೀಕ್ಷೆಯಲ್ಲಿ ಧಾರವಾಹಿ ತಂಡವಿದೆ. ಮೂರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ಇಂದು ಚಿತ್ರೀಕರಣ ಅಂತ್ಯವಾಗಲಿದೆ. ಮುಂದಿನ ವಾರ ತೆರೆ ಮೇಲೆ ತಾಜ್ ಮಹಲ್ ಮುಂದೆ ಮದುವೆ ಪ್ರಪೋಸಲ್ ದೃಶ್ಯ ವೀಕ್ಷಿಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸು ಫ್ರಮ್ ಸೋ ಸಿನಿಮಾಗೆ ಮಲಯಾಳದಲ್ಲಿ ಹೇಗಿದೆ ರೆಸ್ಪಾನ್ಸ್: ಕನ್ನಡದಲ್ಲಿ ಹೊಸ ದಾಖಲೆ

ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ ಹಾಕಿದ್ದ ಮೂವರು ಅರೆಸ್ಟ್

ಸಿನಿಮಾದಲ್ಲಿ ನೀತಿ ಪಾಠ ಹೇಳಿದ್ರೆ ಸಾಲದು ಎಂದ ರಾಕ್ ಲೈನ್ ವೆಂಕಟೇಶ್ ಬುದ್ಧಿ ಹೇಳಿದ್ರೆ ದರ್ಶನ್ ಫ್ಯಾನ್ಸ್ ಹೇಳಿದ್ದೇನು

ಭಾವ ಬಂದರೋ ಹಾಡಿಗೆ ರಾಜ್ ಬಿ ಶೆಟ್ಟಿ ಭರ್ಜರಿ ಸ್ಟೆಪ್ಸ್: ವಿಡಿಯೋ

ದರ್ಶನ್ ಸರ್ ಜೊತೆ ನಾನಿದ್ದೇನೆ ಎಂದ ಧ್ರುವ ಸರ್ಜಾ: ಕೆಡಿ ನೋಡಲಿ ಅಂತಾನಾ ಎಂದ ಡಿಬಾಸ್ ಫ್ಯಾನ್ಸ್

ಮುಂದಿನ ಸುದ್ದಿ
Show comments