Webdunia - Bharat's app for daily news and videos

Install App

ನಟಿ ವೈಷ್ಣವಿ ಮದುವೆಯಾಗಲಿದ್ದ ವರನ ಮೇಲೆ ಹುಡುಗಿಯರಿಗೆ ವಂಚನೆ ಆರೋಪ!

Webdunia
ಶುಕ್ರವಾರ, 25 ನವೆಂಬರ್ 2022 (09:00 IST)
Photo Courtesy: facebook
ಬೆಂಗಳೂರು: ಮೊನ್ನೆಯಷ್ಟೇ ನಟಿ ವೈಷ್ಣವಿ ಗೌಡ ವಿರಾಜ್ ಸಿನಿಮಾ ನಾಯಕ ವಿದ್ಯಾಭರಣ್ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ವೈಷ್ಣವಿ ಇದು ನಿಶ್ಚಿತಾರ್ಥವಲ್ಲ. ನಾನಿನ್ನೂ ಮದುವೆಗೆ ಒಪ್ಪಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಇದರ ಬೆನ್ನಲ್ಲೇ ಈಗ ವೈಷ್ಣವಿ ಮದುವೆಯಾಗಲಿದ್ದಾರೆ ಎನ್ನಲಾಗಿದ್ದ ವರ ವಿದ್ಯಾಭರಣ್ ಬಗ್ಗೆ ಕೆಲವು ಯುವತಿಯರು ವಂಚನೆಯ ಆರೋಪ ಮಾಡಿದ್ದಾರೆ. ಈ ಯುವತಿಯರು ವಿದ್ಯಾಭರಣ್ ಮಾಡಿರುವ ವಂಚನೆ ಬಗ್ಗೆ ಫೋನ್ ಮೂಲಕ ಮಾತನಾಡಿರುವ ಅಡಿಯೋ ಈಗ ವೈರಲ್ ಆಗಿದೆ.

ವಿದ್ಯಾಭರಣ್ ಈಗಾಗಲೇ ಹಲವು ಯುವತಿಯರೊಂದಿಗೆ ಡೇಟಿಂಗ್ ಎಂದು ಸುತ್ತಾಡಿ ಕೈಕೊಟ್ಟಿದ್ದಾನೆ. ಆತ ಮತ್ತು ಆತನ ಕುಟುಂಬದವರೂ ಇದರಲ್ಲಿ ಶಾಮೀಲಾಗಿದ್ದಾರೆ. ನಟಿಸಿದ್ದು ಕೇವಲ ಒಂದು ಸಿನಿಮಾದಲ್ಲಿ. ಯುವತಿಯರಿಗೆ ತನ್ನ ಬಳಿ ಆಡಿ ಕಾರಿದೆ, ಬ್ಯುಸಿನೆಸ್ ಇದೆ ಎಂದು ಬಲೆಗೆ ಬೀಳಿಸಿ ಮೋಸ ಮಾಡುತ್ತಿದ್ದ ಎಂದು ಅಡಿಯೋದಲ್ಲಿ ಆರೋಪಿಸಲಾಗಿದೆ.

ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ವಿದ್ಯಾಭರಣ್, ನನಗೆ ಮತ್ತು ವೈಷ್ಣವಿಗೆ ಇನ್ನೂ ನಿಶ್ಚಿತಾರ್ಥವಾಗಿಲ್ಲ. ಅವರು ಒಪ್ಪಿಕೊಂಡ ಮೇಲಷ್ಟೇ ಮುಂದಿನ ಮಾತು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಲಿವುಡ್‌ನಲ್ಲಿ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸ್ಮೈಲ್‌ ರಾಜ ಹಾಸ್ಯನಟ ಮದನ್‌ಬಾಲು ನಿಧನ

ಶೂಟಿಂಗ್‌ಗಾಗಿ ತಂಗಿದ್ದ ಹೊಟೇಲ್‌ನಲ್ಲಿ ಶವವಾಗಿ ಪತ್ತೆಯಾದ ಮಲಯಾಳಂ ನಟ ಕಲಾಭವನ್‌

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗುತ್ತಿದ್ದಂತೇ ನಟಿ ರಮ್ಯಾ ರಿಯಾಕ್ಷನ್ ನೋಡಿ

ವಿಜಯ್ ದೇವರಕೊಂಡ ಸೋಲಿನ ಸರಣಿಯನ್ನು ಕೊನೆಗೊಳಿಸಿದ ಕಿಂಗ್‌ಡಮ್‌: ಗೆಳೆಯನ ಸಕ್ಸಸ್‌ಗೆ ರಶ್ಮಿಕಾ ಫುಲ್ ಹ್ಯಾಪಿ

ದಿ ಕೇರಳ ಸ್ಟೋರಿ ಸಿನಿಮಾಗೆ ರಾಷ್ಟ್ರೀಯ ಮನ್ನಣೆ: ಸಿಎಂ ಸೇರಿದಂತೆ ಹಲವರಿಂದ ಅಸಮಾಧಾನ

ಮುಂದಿನ ಸುದ್ದಿ
Show comments