Webdunia - Bharat's app for daily news and videos

Install App

ನಟಿ ಪ್ರಿಯಾಂಕಾ ಉಪೇಂದ್ರ ಫೈರ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಈ ನಟ ಕಾರಣವಂತೆ

Webdunia
ಗುರುವಾರ, 25 ಅಕ್ಟೋಬರ್ 2018 (10:18 IST)
ಬೆಂಗಳೂರು : ನಟ ಚೇತನ್ ಕಾರಣದಿಂದಾಗಿ ಇದೀಗ ನಟಿ ಪ್ರಿಯಾಂಕಾ ಉಪೇಂದ್ರ ಅವರು ಫೈರ್ (ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆಯಂಡ್ ಈಕ್ವಾಲಿಟಿ) ಯಿಂದ ಹೊರನಡೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಒಳ್ಳೆಯ ಉದ್ದೇಶಗಳ ಕನಸು ಕಟ್ಟಿಕೊಂಡು ರೂಪಿಸಿದ ಫೈರ್ ಸಂಸ್ಥೆಗೆ ನಟಿ ಪ್ರಿಯಾಂಕಾ ಉಪೇಂದ್ರ ಎರಡು ವರ್ಷಗಳ ಕಾಲ ಅಧ್ಯಕ್ಷೆ ಆಗಿದ್ದರು. ಕನ್ನಡ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳ ಮೇಲೆ ಯಾವುದೇ ರೀತಿಯ ಶೋಷಣೆ ನಡೆದಾಗ ಅವರ ಜತೆ ನಿಂತು ಧೈರ್ಯ ತುಂಬಿ ನ್ಯಾಯ ಕೊಡಿಸುವುದು, ಸಮಸ್ಯೆಗೆ ಪರಿಹಾರ ಹೇಳುವುದು ಸಂಸ್ಥೆಯ ಉದ್ದೇಶವಾಗಿತ್ತು. ಅದೂ ಕೂಡ ಆಗದಿದ್ದಾಗ ಕಾನೂನಿನ ಮೂಲಕ ನ್ಯಾಯ ಪಡೆಯಲಿಕ್ಕೆ ಫೈರ್ ಸಂಸ್ಥೆ ಬಾಧಿತರ ಬೆನ್ನಿಗೆ ನಿಲ್ಲಬೇಕು.

 

ಆದರೆ ನಟ ಚೇತನ್‌ಗೆ ಸಮಸ್ಯೆ ಬಗೆಹರಿಸುವುದಕ್ಕಿಂತ ಸುದ್ದಿಯಾಗುವುದೇ ದೊಡ್ಡದಾಗಿದೆ. ಯಾವುದೇ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೆ ಒಂದು ದಾರಿ ಇರುತ್ತದೆ. ಮೊದಲು ಅದರ ಕಡೆ ಗಮನ ಕೊಡಬೇಕು. ಏಕಾಏಕಿ ಮಾಧ್ಯಮಗಳ ಮುಂದೆ ಹೋಗುವುದೋ, ಸೋಷಲ್ ಮೀಡಿಯಾಗಳಲ್ಲಿ ಹಾಕುವುದಲ್ಲ. ಹೀಗಾಗಿ ಆ ಸಂಸ್ಥೆಯ ಉದ್ದೇಶಗಳನ್ನೇ ಮರೆತು ನಡೆಯುತ್ತಿದ್ದಾಗ ನಾನೂ ಸೇರಿದಂತೆ ನನ್ನ ಜತೆ ಬಂದವರೆಲ್ಲ ಸಂಸ್ಥೆಯಿಂದ ಆಚೆ ಬಂದಿದ್ದಾರೆ. ನಾನು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿರುವೆ ಎಂದು ನಟಿ ಪ್ರಿಯಾಂಕಾ ಉಪೇಂದ್ರ ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಭಿನಯ ಸರಸ್ವತಿ ಬಿ ಸರೋಜಾದೇವಿಗೆ ಇಂದು ಅಂತಿಮ ಕ್ರಿಯೆ

ರಾಜ್‌ಕುಮಾರ್‌, ಪುನೀತ್ ಹಾದಿಯಲ್ಲೇ ನಡೆದ ಸರೋಜಾ ದೇವಿ, ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ನಟಿ

ವಿವಾಹದ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾದ ಕಪ್ಪು ಸುಂದರಿ ಸ್ಯಾನ್ ರೆಚಲ್‌, ಸಾವಿನ ಸುತ್ತಾ ಹಲವು ಅನುಮಾನ

ಬಿ ಸರೋಜಾದೇವಿ ಕೊನೆಯ ಕ್ಷಣದಲ್ಲಿ ಏನಾಯ್ತು ಇಲ್ಲಿದೆ ವಿವರ

ಹಿಂದೂ ದೇವರ ಮೇಲೆ ಉಚ್ಚೆ, ಕಕ್ಕ ಮಾಡ್ತೀನಿ ಎಂದವನ ಸ್ನೇಹ ಬೇಕಾ: ಯೋಗರಾಜ್ ಭಟ್ ಟ್ರೋಲ್

ಮುಂದಿನ ಸುದ್ದಿ
Show comments