ಕೊಚ್ಚಿ: ಸಿನಿಮಾ ನಟ-ನಟಿಯರ ಸಂಸಾರ ಜೀವನ ಮುರಿದು ಬೀಳುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಈ ನಟಿ ಸಿನಿಮಾದಲ್ಲಿ ನಟಿಸುವ ಕನಸಿಗಾಗಿ ಪತಿಯನ್ನೇ ತೊರೆಯಲು ನಿರ್ಧರಿಸಿದ್ದಾಳೆ ಎಂದು ಗಾಸಿಪ್ ಹರಡಿದೆ. ಅದು ಬೇರಾರೂ ಅಲ್ಲ ಕನ್ನಡದಲ್ಲೂ ನಟಿಸಿದ ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ನಟಿ ಮೀರಾ ಜಾಸ್ಮಿನ್.
ಆಕೆ ತನ್ನ ದುಬೈ ನಿವಾಸಿ ಪತಿ ಅನಿಲ್ ಜಾನ್ ಟಿಟುಸ್ ಜತೆಗಿನ ಸಂಸಾರ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ ಎಂದು ಸುದ್ದಿ ಹಬ್ಬಿದೆ. ಮದುವೆಯಾದ ನಂತರ ಕೆಲವು ದಿನ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು ಪತಿ ಜತೆ ದುಬೈಯಲ್ಲಿ ಹಾಯಾಗಿದ್ದ ಮೀರಾ ಈಗ ಮತ್ತೆ ಸಿನಿಮಾಗೆ ಮರಳಿದ್ದಾರೆ.
ಸದ್ಯಕ್ಕೆ ಆಕೆಗೆ ಮಲಯಾಳಂ ಚಿತ್ರರಂಗದಲ್ಲಿ ಅವಕಾಶಗಳೂ ಒದಗಿ ಬರುತ್ತಿದೆ. ಈ ಹಿನ್ನಲೆಯಲ್ಲಿ ಪತಿಗಿಂತ ಸಿನಿಮಾವೇ ಹೆಚ್ಚು ಎಂದು ಆರಿಸಿಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಮೀರಾ ಮತ್ತು ಪರಿ ಅನಿಲ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಿದ್ದಾರಂತೆ. ಅಂದ ಹಾಗೆ ಅನಿಲ್ ಗೆ ಇದು ಎರಡನೇ ಮದುವೆಯಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ